ತುಮಕೂರು : ಟೀ ಶಾಪ್ ಬಳಿ ಬೃಹತ್ ಗಾತ್ರದ ಹೆಬ್ಬಾವು ಒಂದು ಕಾಣಿಸಿಕೊಂಡಿದ್ದು, ಬೃಹತ್ ಗಾತ್ರದ ಹೆಬ್ಬಾವು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಡಿಗ್ರಿ ಕಾಲೇಜು ಬಳಿ ಈ ಘಟನೆ ನಡೆದಿದೆ.

ಮಂಜುನಾಥ್ ಎಂಬುವರ ಟೀ ಶಾಪ್ ಬಳಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯರು ಈ ಹೆಬ್ಬಾವು ಕಂಡು ಬಿಚ್ಚಿಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಉರಗ ಸಂರಕ್ಷಕ ದಿಲೀಪ್ ಸ್ಥಳಕ್ಕೆ ಬಂದಿದ್ದಾರೆ. ಉರಗ ಸಂರಕ್ಷಕ ದಿಲೀಪ್ ರಿಂದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಸುಮಾರು 12 ಕೆಜಿ, 10 ಅಡಿ ಉದ್ದದ 15 ವರ್ಷದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಹೆಬ್ಬಾವನ್ನ ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉರಗ ಸಂರಕ್ಷಕರು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.