ಕರ್ನಾಟಕ

ಮಧ್ಯದ ಅಮಲಿನಲ್ಲಿ ಯುವಕರಿಂದ ಪಿಎಸ್‌ಐ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ

ರಾಮನಗರದ ರಾಯರದೊಡ್ಡಿಯಲ್ಲಿ ಸುಪ್ರಿತ್​ ವೈನ್ಸ್​ ಬಳಿ ಮಫ್ತಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಮಧ್ಯ ಸೇವಿಸಿದ ಮೂವರು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ರಾಮನಗರ: ರಾಮನಗರದ ರಾಯರದೊಡ್ಡಿಯಲ್ಲಿ ಸುಪ್ರಿತ್ ವೈನ್ಸ್ ಬಳಿ ಮಫ್ತಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಮಧ್ಯ ಸೇವಿಸಿದ ಮೂವರು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. 

ಐಜೂರು ಪೊಲೀಸ್ ಠಾಣೆ ಪ್ರಭಾರ ಪಿಎಸ್‌ಐ ದುರ್ಗಪ್ಪ ಹಲ್ಲೆಗೊಳಗಾದವರು. ರಾಯರದೊಡ್ಡಿ ವಾಸಿ ಕಿರಣ್ ಕುಮಾರ್‌, ಪಾದರಹಳ್ಳಿ ವಾಸಿ ಶ್ರೀಕಾಂತ ಹಾಗೂ ಚೇತನ್ ಅಲಿಯಾಸ್ ಕುಂತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರ ಆರೋಪಿಯನ್ನು ಪತ್ತೆ ಮಾಡುವ ಸಲುವಾಗಿ ಮಫ್ತಿಯಲ್ಲಿ ಪಿಎಸ್ ಐ ದುರ್ಗಪ್ಪರವರು ಪೇದೆಗಳಾದ ಚನ್ನಬಸಪ್ಪ ಮತ್ತು ಶಿವರಾಜ ಅವರೊಂದಿಗೆ ರಾಯರದೊಡ್ಡಿಗೆ ಹೊಗಿದ್ದಾರೆ. ಸುಪ್ರಿತಾ ವೈನ್ಸ್ ಬಳಿ ಪೇದೆ ಚನ್ನಬಸಪ್ಪ ಹಾಗೂ ಬಿಜಿಎಸ್ ವೃತ್ತದ ಬಳಿ ಪೇದೆ ಶಿವರಾಜ ಅವರನ್ನು ನಿಲ್ಲಿಸಿದ್ದಾರೆ. ದುರುಗುಪ್ಪ ಸುಪ್ರೀತಾ ವೈನ್ಸ್ ಮುಂಭಾಗ ಆರೋಪಿ ಮತ್ತು ಮಾಲಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಪಾನಮತ್ತರಾಗಿದ್ದ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ದುರುಗುಪ್ಪರವರು ತಾನು ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಏಕೆ ಗಲಾಟೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆ ಗುಂಪಿನಲ್ಲಿದ್ದ ಓರ್ವ ತನ್ನ ಕೈಯಲ್ಲಿದ್ದ ಬಿಯರ್ ಬಾಟಲ್‌ನಿಂದ ದುರುಗುಪ್ಪರವರ ಬಲ ಭಜುದ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಉಳಿದವರು ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ದುರ್ಗಪ್ಪ ಐಜೂರು ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.