ಪುಷ್ಪ-2 ಸಿನಿಮಾ ಈಗಾಗಲೇ ಬಾಹುಬಲಿ, ಪುಷ್ಪ 1 ದಾಖಲೆ ಬ್ರೇಕ್ ಮಾಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ 2 ವಿಶ್ವದ್ಯಂತ ಡಿಸೆಂಬರ್ 5ರಂದು ತೆರೆ ಕಾಣ್ತಿದೆ. ಅದಕ್ಕೂ ಮೊದಲು ಇಂದು ರಾತ್ರಿ 9:30ಕ್ಕೆ ಕರ್ನಾಟಕದಲ್ಲಿ ಹಲವು ಕಡೆ ನೈಟ್ ಶೋ ಆರಂಭವಾಗಲಿದೆ. ಈಗಾಗಲೇ ಇದರ ಸೆಲೆಬ್ರೇಶನ್ ಜೋರಾಗಿದೆ. ಸದ್ಯ ಈ ಕುರಿತು ಪುಷ್ಪ 2 ವಿತರಕ ಲಕ್ಷ್ಮಿಕಾಂತ್ ಮಾತನಾಡಿದ್ದಾರೆ. ಪುಷ್ಪ 2 ಪ್ರೀ ಬ್ಯುಸಿನೆಸ್ ಚೆನ್ನಾಗಿ ಇದೆ, ಸಿನಿಮಾ ರಿಲೀಸ್ ಆಗಿ ಒಂದು ವಾರಕ್ಕೆ ಇದರ ಲೆಕ್ಕಾಚಾರ ಗೊತ್ತಾಗಲಿದೆ. ಅಲ್ಲದೆ ಈಗಾಗಲೇ ಬಾಹುಬಲಿ, ಪುಷ್ಪ 1 ದಾಖಲೆ ಸಹ ಈ ಚಿತ್ರ ಬ್ರೇಕ್ ಮಾಡಿದೆ ಎಂದಿದ್ದಾರೆ. ಅಂದಹಾಗೆ ಭೈರತಿ ರಣಗಲ್ ಚಿತ್ರಕ್ಕೆ ಯಾವುದೇ ತೊಂದರೆ ಆಗದಂತೆ ಪುಷ್ಪ 2 ಸ್ಕ್ರೀನಿಂಗ್ ಆಗುತ್ತೆ ಈ ಬಗ್ಗೆ ಯಾವುದೇ ಗೊಂದಲಬೇಡ ಎಂದಿರುವ ಲಕ್ಷ್ಮಿಕಾಂತ್ ಟಿಕೆಟ್ ದರ ಹೆಚ್ಚಳ ಯಾಕೆ..? ಅನ್ನೋದರ ಬಗ್ಗೆ ಸಹ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಹಾಗು ತೆಲುಗು ವರ್ಷನ್ ಗೆ ಡಿಮ್ಯಾಂಡ್ ಜಾಸ್ತಿ ಇದೆ, ಅಲ್ಲದೆ ಸಿನಿಮಾ ಬಜೆಟ್ ಹೆಚ್ಚು ಇರೋ ಕಾರಣ ಟಿಕೆಟ್ ದರ ಜಾಸ್ತಿ ಇದೆ. ಇನ್ನು ಶ್ರೀಲೀಲಾ ಕಿಸಿಕ್ ಹಾಡಿಗಿಂತ ರಶ್ಮಿಕಾ ಫೀಲಿಂಗ್ ಸಾಂಗ್ ಉತ್ತಮ ರೀಚ್ ಕಂಡಿದೆ. ಕರ್ನಾಟಕದಲ್ಲಿ ಕೆಜಿಎಫ್ ರೆಕಾರ್ಡ್ ನೂ ಬ್ರೇಕ್ ಮಾಡುತ್ತೆ ಪುಷ್ಪ 2 ಅನ್ನೋ ಕಂಟ್ರೋವರ್ಸಿ ಹೇಳಿಕೆ ಕೊಟ್ಟಿದ್ದ ಲಕ್ಷ್ಮಿಕಾಂತ್ ಇಂದು ಈ ವಿಚಾರಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ.ಒಂದಲ್ಲ ಒಂದು ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಲೇ ಬೇಕು ಆ ಅರ್ಥದಲ್ಲಿ ಹೇಳಿದ್ದು ಅಷ್ಟೇ ತಪ್ಪಾಗಿ ತಿಳಿಯಬೇಡಿ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
ಒಟ್ಟಾರೆ ಪುಷ್ಪ 2 ಸಿನಿಮಾ ಮೇಲೆ ವಿತರಕ ಲಕ್ಷ್ಮಿಕಾಂತ್ ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. 3ದಿನದಲ್ಲಿ ಪುಷ್ಪ 2 ಕಲೆಕ್ಷನ್ ಯಾವ ಯಾವ ಸಿನಿಮಾ ದಾಖಲೆ ಮುರಿಯುತ್ತೆ ಅನ್ನೋದು ಗೊತ್ತಾಗಲಿದೆ ಎಂದಿದ್ದಾರೆ.