ಲಕ್ನೋ: ಒಲಿಂಪಿಕ್ಸ್ ಪದಕ ವಿಜೇತೆ ಷೆಟ್ಲರ್ ಪಿ.ವಿ. ಸಿಂಧು ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದಾರೆ.
ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಉನ್ನತಿ ಹೂಡಾ ಅವರ ವಿರುದ್ಧ 21-12, 21-09 ಗೇಮ್‌ಗಳ ಅಂತರದಿಂದ ಜಯ ಗಳಿಸಿ ಫೈನಲ್ ಪ್ರವೇಶಿಸಿದಾರೆ. ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-15, 21-17 ಗೇಮ್‌ಗಳ ಅಂತರದಿಂದ ಚೀನಾದ ದಾಯಿ ವಾಂಗ್ ರನ್ನು ಸೋಲಿಸಿದ್ದರು.
ಥಾಯ್ಲೆಂಡ್ನ ಲಾಲಿನ್ರಾಟ್ ಚೈವಾನ್ ಮತ್ತು ಚೀನಾದ ಲುವೊ ಯು ವು ನಡುವೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಆಟತಾರ್ತಿಯ ವಿರುದ್ಧ ಸಿಂಧು ಫೈನಲ್ ಪಂದ್ಯವನ್ನಾಡಲಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಸಿಂಧು, ‘ಇಂದಿನ ಪ್ರದರ್ಶನದಿಂದ ನನಗೆ ತುಂಬ ಸಂತೋಷವಾಗಿದೆ. ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದೇನೆ. ನಾನು ಕೆಲವು ಸ್ಟ್ರೋಕ್ಗಳನ್ನು ಪ್ರಯತ್ನಿಸುತ್ತಿದ್ದೆ ಮತ್ತು ಒಟ್ಟಾರೆಯಾಗಿ, ನಾನು ನೀಡಿದ ಪ್ರದರ್ಶನದ ಬಗ್ಗೆ ಖಷಿ ಇದೆ. ಉನ್ನತಿ ಅತ್ಯುತ್ತಮವಾಗಿ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಭವಿಷ್ಯದ ಆಟಗಾರ್ತಿಯಾಗಿರುವ ಅವರಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.