ಚಿಕ್ಕಮಗಳೂರಿನಲ್ಲಿ ಕಾರು ತೆಗೆಯುವ ವಿಚಾರವಾಗಿ ಪೊಲೀಸ್ ಸಿಬ್ಬಂದಿಗಳು ಕಾರು ಚಾಲಕನನ್ನು ಹಿಡಿದು, ನಡುರಸ್ತೆಯಲ್ಲಿ ಥಳಿಸಿರುವ ಘಟನೆಯೊಂದು ನಡೆದಿದೆ. ರಸ್ತೆಬದಿ ನಿಲ್ಲಿಸಿದ್ದ ಕಾರು ತೆಗೆಯುವ ವಿಚಾರವಾಗಿ ಕಾರು ಚಾಲಕನಿಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ.
ಹೌದು, ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನಿಗೆ ಮನಬಂದಂತೆ ಲಾಠಿ ಏಟು ನೀಡಿದ್ದು, ಕಾರು ಚಾಲಕ ಅಜಿತ್ ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಅಜಿತ್ ನನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಣ್ಣ ವಿಚಾರಕ್ಕೆ ಕಳಸ ಠಾಣೆ ಪೊಲೀಸರ ಈ ರೀತಿ ವರ್ತಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.