ಮುಡಾ ಪ್ರಕರಣವನ್ನ ಸಿಬಿಐಗೆ ಕೋಡೋದು ಬೇಡ ಅಂತ ಹೈಕೋರ್ಟ್ ತೀರ್ಪು ಕೊಟ್ಟಿದೆ. ಅದಕ್ಕೆ ನಾವು ಗೌರವ ಕೊಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಆರ್.ಅಶೋಕ್, ಕಾನೂನು ಪ್ರಕಾರ ಏನ್ ಹೋರಾಟ ಮಾಡಬೇಕೋ ಅದನ್ನ ಮಾಡುತ್ತೇವೆ ಎಂದಿದ್ದಾರೆ.
ಬಿಜೆಪಿಯ ಒಳ ಜಗಳ ಹೋರಾಟಕ್ಕೆ ಮತ್ತಷ್ಟು ಹಿನ್ನಡೆ ಆಯ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್ ಪಕ್ಷದ ವಿಚಾರವನ್ನ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು ಅಂತ ಹೈಕಮಾಂಡ್ ಹೇಳಿದೆ. ನಮ್ಮ ಇನ್ ಚಾರ್ಜ್ ಸುಧಾಕರ್ ರೆಡ್ಡಿ ಅವರು ಕೂಡ ಅದೇ ಹೇಳಿದ್ದಾರೆ. ಹಾಗಾಗಿ ನಾಲ್ಕು ಗೋಡೆ ಮಧ್ಯೆ ಎಲ್ಲವನ್ನು ಬಗೆಹರಿಸಿಕೊಳ್ತೀವಿ. ಮುಡಾ, ವಾಲ್ಮೀಕಿ, ಸರಣಿ ಆತ್ಮಹತ್ಯೆ ಸೇರಿದಂತೆ ಸಾಕಷ್ಟು ವಿಚಾರಗಳು ಇವೇ. ಅವನ್ನೆಲ್ಲ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಈಗ ಸ್ವಲ್ಪ ಹಿನ್ನಡೆಯಾಗಿದೆ ಅಷ್ಟೇ. ಆದರೆ ಪಕ್ಷದ ಆಂತರಿಕ ವಿಚಾರವನ್ನ ಕೆಲವೇ ದಿನಗಳಲ್ಲಿ ಹೈಕಮಾಂಡ್ ಬಗೆಹರಿಸುತ್ತೆ. ಬಳಿಕ ನರ್ಮಲ್ ಬಿಜೆಪಿ ಆಗುತ್ತೆ, ಮತ್ತೆ ಎಲ್ಲಾರು ಒಟ್ಟಾಗಿ ಹೋರಾಟ ಮಾಡ್ತೀವಿ. ನಾವು ಒಟ್ಟಾಗಿ ಹೋಗಬೇಕಾಗಿತ್ತು. ಆದರೆ ಸಮಸ್ಯೆ ಆಗಿದೆ. ನಾನೊಬ್ಬ ಕಾರ್ಯಕರ್ತನಾಗಿ ಹೇಳ್ತೀನಿ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಬಣ ರಾಜಕೀಯದ ವಿರುದ್ಧ ಆರ್. ಅಶೋಕ್ ಬೇಸರ ವ್ಯಕ್ತಪಡೆಸಿದ್ದಾರೆ.