ಬ್ರಿಸ್ಬೇನ್: ಟೀಂ ಇಂಡಿಯಾದ ಹಿರಿಯ ಸ್ಪಿನ್ ಆಲ್ರೌಂಡರ್ ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿಗೆ ತೆರೆ ಎಳೆದಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ಮೂರನೇ ಪಂದ್ಯ ಡ್ರಾ ಆದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಆರ್. ಅಶ್ವಿನ್ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಯ ಆಟಗಳಲ್ಲಿ ಭಾರತೀಯ ಕ್ರಿಕೆಟರ್ ಆಗಿ ಇದು ನನ್ನ ಕೊನೆಯ ದಿನವಾಗಿದೆ. ನನ್ನಲ್ಲಿ ಕ್ರಿಕೆಟ್ ಇನ್ನೂ ಸ್ವಲ್ಪ ಉಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್ನಲ್ಲಿ ಪ್ರದರ್ಶಿಸಲು ಬಯಸುತ್ತೇನೆ ಎಂದು ತಿಳಿಸಿದ್ಧಾರೆ.
"Ashwin's emotional speech marks the end of an era on the cricket field. A deep reflection of dedication and struggle. 🏏❤️ #AshwinRetirement #EmotionalSpeech#INDvAUS pic.twitter.com/GdlpoYXVeS
ಅಶ್ವಿನ್ ಅವರು ತಮ್ಮ ನಿವೃತ್ತಿ ವಿಚಾರವನ್ನು ಮೊದಲು ಹೇಳಿದ್ದು ವಿರಾಟ್ ಕೊಹ್ಲಿಗೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕೂತಿದ್ದ ಅಶ್ವಿನ್ ಅವರು ಕೊಹ್ಲಿ ಬಳಿ ತಾವು ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಿದರು. ಈ ವೇಳೆ ಕೊಹ್ಲಿ ಭಾವುಕರಾಗಿ ಒಂದು ಅಪ್ಪುಗೆ ಕೊಟ್ಟರು.
2010 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್ 2011 ರಲ್ಲಿ ದೆಹಲಿಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 106 ಟೆಸ್ಟ್ ಪಂದ್ಯವನ್ನಾಡಿರುವ ಅಶ್ವಿನ್ 537 ವಿಕೆಟ್ಗಳನ್ನು ಪಡೆದಿದ್ದಾರೆ. ಜತೆಗೆ 6 ಶತಕಗಳೊಂದಿಗೆ 3503 ರನ್ ಗಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನ ತಂಡದ ಸದಸ್ಯನೂ ಆಗಿರುವ ಅಶ್ವಿನ್ 116 ಏಕದಿನ ಪಂದ್ಯಗಳನ್ನಾಡಿದ್ದು 707 ರನ್ ಗಳಿಸಿದ್ದು, 156 ವಿಕೆಟ್ ಪಡೆದಿದ್ದಾರೆ. 65 ಟಿ20 ಪಂದ್ಯಗಳನ್ನಾಡಿದ್ದು, 72 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 2016 ರಲ್ಲಿ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
𝙏𝙝𝙖𝙣𝙠 𝙔𝙤𝙪 𝘼𝙨𝙝𝙬𝙞𝙣 🫡
A name synonymous with mastery, wizardry, brilliance, and innovation 👏👏
The ace spinner and #TeamIndia's invaluable all-rounder announces his retirement from international cricket.
Congratulations on a legendary career, @ashwinravi99 ❤️ pic.twitter.com/swSwcP3QXA