ಕ್ರೀಡೆಗಳು

ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ 10 ಕ್ರಿಕೆಟರ್‌ಗಳ ಹೆಸರು

ಸಿಲಿಕಾನ್‌ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ರ್ಯಾಂಡ್‌ಗಳಿಗೆ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ.

ಬೆಂಗಳೂರು: ಸಿಲಿಕಾನ್‌ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ರ್ಯಾಂಡ್‌ಗಳಿಗೆ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ನಿರ್ಮಾಣವಾಗಿ 50 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ 10 ದಿಗ್ಗಜ ಕ್ರಿಕೆಟಿಗರ ಗೌರವಾರ್ಥ ಅವರ ಹೆಸರನ್ನು ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ಇಡಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ನಿರ್ಧರಿಸಿದೆ.

ವರದಿಗಳ ಪ್ರಕಾರ, ಪಿ1 ಸ್ಟಾಂಡ್ಗೆ ಎರಪಳ್ಳಿ ಪ್ರಸನ್ನ, ಪಿ2 ಸ್ಟ್ಯಾಂಡ್ಗೆ ಜಿ.ಆರ್ .ವಿಶ್ವನಾಥ್, ಪಿ ಟೆರೇಸ್ಗೆ ಬಿಎಸ್ಚಂದ್ರಶೇಖರ್, ಪಿ ಕಾರ್ಪೊರೇಟ್ಗೆ ಸಯ್ಯದ್ ಕೀರ್ಮಾನಿ, ಎಮ್1 ಸ್ಟ್ಯಾಂಡ್ಗೆ ಬ್ರಿಜೇಶ್ ಪಟೇಲ್, ಎಮ್2 ಸ್ಟ್ಯಾಂಡ್ಗೆ ರೋಜರ್ ಬಿನ್ನಿ ಹೆಸರಿಡಲಾಗಿದೆ. ಡೈಮಂಡ್ ಬಾಕ್ಸ್ಅನಿಲ್ ಕುಂಬ್ಳೆ, ಎನ್ ಸ್ಟ್ಯಾಂಡ್ಗೆ ರಾಹುಲ್ದ್ರಾವಿಡ್, ಪಿ1 ಸ್ಟ್ಯಾಂಡ್ಗೆ ಜಾವಗಲ್ ಶ್ರೀನಾಥ್, ಪಿ4 ಸ್ಟ್ಯಾಂಡ್ಗೆ ವೆಂಕಟೇಶ್ ಪ್ರಸಾದ್ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.

ಐದು ದಶಕಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಭಾರತ ತಂಡದಲ್ಲಿ ಕರ್ನಾಟಕದ ಎರ್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಆವರೂ ಇದ್ದರು.