ದೇಶ

ʼಮೇಕ್ ಇನ್ ಇಂಡಿಯಾʼ ಒಳ್ಳೆಯ ಐಡಿಯಾ, ಆದ್ರೆ ವಿಫಲವಾಗಿದೆ - ರಾಹುಲ್‌ ಗಾಂಧಿ

ಭಾರತ ಆರ್ಥಿಕವಾಗಿ ಬೆಳೆದಿದ್ದರೂ, ನಿರುದ್ಯೋಗ ನಿರಂತರ ಸವಾಲಾಗಿ ಉಳಿದಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ..

ನಿರುದ್ಯೋಗವನ್ನು ಹೋಗಲಾಡಿಸಲು ನಮ್ಮ ಸರ್ಕಾರಕ್ಕೂ ಸಾಧ್ಯವಾಗಲಿಲ್ಲ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೂ ಆಗಲಿಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.. ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಒಳ್ಳೆಯ ಐಡಿಯಾ, ಆದರೆ ಅದು ವಿಫಲವಾಯಿತು ಎಂದು ಕುಟುಕಿದ್ದಾರೆ.. ದೇಶದಲ್ಲಿ ವಸ್ತುಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುವ ಅತ್ಯುತ್ತಮ ಕಂಪನಿಗಳನ್ನು ನಾವು ಹೊಂದಿದ್ದೇವೆ, ಆದರೆ ಮೂಲಭೂತವಾಗಿ, ನಾವು ಏನು ಮಾಡಿದ್ದೇವೆ ಎಂದರೆ ನಾವು ಉತ್ಪಾದನೆಯನ್ನ ಚೀನಿಯರಿಗೆ ಹಸ್ತಾಂತರಿಸಿದ್ದೇವೆ.. ಈ ಮೊಬೈಲ್ ಫೋನ್ ಅನ್ನು ಭಾರತದಲ್ಲಿ ತಯಾರಿಸುತ್ತೇವೆ ಎಂದು ನಾವು ಹೇಳುತ್ತಿದ್ದರೂ ಸಹ ಈ ಫೋನ್ ಭಾರತದಲ್ಲಿ ತಯಾರಿಸಲ್ಪಟ್ಟಿಲ್ಲ.. ಈ ಫೋನ್‌ನ ಎಲ್ಲಾ ಬಿಡಿಭಾಗಳೂ ಚೀನಾದಲ್ಲಿ ತಯಾರಿಸಲಾಗುತ್ತದೆ ಎಂದಿದ್ದಾರೆ.. ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನದ ಹೊರತಾಗಿಯೂ ಉತ್ಪಾದನಾ ಕ್ಷೇತ್ರದ ಪಾಲು 2014ರಲ್ಲಿ ಶೇ. 15.3 ಇದ್ದುದು ಇಂದು ಶೇ. 12.6ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ. ಇದಕ್ಕೆ ನಾನು ಪ್ರಧಾನಿ ಮೋದಿಯನ್ನು ದೂಷಿಸುತ್ತಿಲ್ಲ. ಉತ್ಪಾದನೆಯನ್ನು ಹೆಚ್ಚಿಸಲು ಅತ್ಯುತ್ತಮ ಕಂಪನಿಗಳು ಪ್ರಯತ್ನಿಸಿದ್ದವು. ಆದರೆ ವಿಫಲವಾದವು ಅಂತಾ ಆರೋಪಿಸಿದ್ದಾರೆ.. ಭಾರತ ಆರ್ಥಿಕವಾಗಿ ಬೆಳೆದಿದ್ದರೂ, ನಿರುದ್ಯೋಗ ನಿರಂತರ ಸವಾಲಾಗಿ ಉಳಿದಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ..