ತುಮಕೂರು : ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಹಾನಿಯಾಗಿರುವ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾದ ತಡಕಲೂರು ಗ್ರಾಮದಲ್ಲಿ ನಡೆದಿದೆ. ನಾಲ್ಕು ಎಕರೆ ಹೊಲದಲ್ಲಿ ಬೆಳೆದ ಹತ್ತಿ ಬೆಳೆ ನಾಶವಾಗಿದೆ. ಕಳೆದ ರಾತ್ರಿ ಸುರಿದ ಮಳೆಗೆ ಜಮೀನು ಜಲಾವೃತ ಹತ್ತಿ ಬೆಳೆಯು ನಾಶವಾಗಿದೆ. ರೈತರಾದ ರವಿ ಮತ್ತು ಗೋವಿಂದ ಎಂಬುವರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದರು.

ರೈತರು ನಾಲ್ಕು ಎಕರೆ ಜಮೀನಿನಲ್ಲಿ 4-5 ಲಕ್ಷ ಖರ್ಚು ಮಾಡಿ ಹತ್ತಿ ಬೆಳೆದಿದ್ದರು. ಅಂದಾಜು 7-8 ಲಕ್ಷ ರೂಪಾಯಿ ಹಣ ಗಳಿಸುವ ನಿರೀಕ್ಷೆಯನ್ನ ಹೊಂದಿದದ್ದರು. ಹತ್ತಿಬೆಳೆ ನಷ್ಟ ದಿಂದ ರೈತತರು ಕಂಗಾಲಾಗಿದ್ದಾರೆ. ಬೆಳೆ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.