ಕರ್ನಾಟಕ
ರಾಜು ಜೇಮ್ಸ್ ಬಾಂಡ್ ಟ್ರೇಲರ್ ಔಟ್… ಶ್ರೀಮುರಳಿ ಸಾಥ್
ಕಾಮಿಡಿ ಜನರ್ ನ ಈ ಚಿತ್ರದಲ್ಲಿ ನಾಯಕಿಯಾಗಿ ಮೃದುಲ ಹಾಗೂ ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಚಿತ್ರ ರಾಜು ಜೇಮ್ಸ್ ಬಾಂಡ್.. ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ " ಚಿತ್ರದ ಟ್ರೇಲರ್ ಸದ್ಯ ರಿಲೀಸ್ ಆಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದರು. ಟ್ರೇಲರ್ ನಲ್ಲೇ ಮೋಡಿ ಮಾಡಿರುವ ಈ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ.
ನಾನು ಹದಿನೇಳು ವರ್ಷಗಳ ಹಿಂದೆ ಶ್ರೀಮುರಳಿ ಅವರ "ಮಿಂಚಿನ ಓಟ" ಚಿತ್ರದಲ್ಲಿ ಕೆಲಸ ಮಾಡಿದ್ದೆ. ಈಗ ಹದಿನೇಳು ವರ್ಷಗಳ ನಂತರ ಮತ್ತೆ ನನ್ನ ನಿರ್ದೇಶನದ ಸಿನಿಮಾದ ಟ್ರೇಲರ್ ಅವರಿಂದ ಅನಾವರಣವಾಗಿದ್ದು ಖುಷಿಯಾಗಿದೆ. "ಎಂದು ಮಾತನಾಡಿದ ದೀಪಕ್ ಮಧುವನಹಳ್ಳಿ, ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.
ನಾನು ಅಣ್ಣವ್ರು ಹಾಗೂ ಅಪ್ಪು ಅವರ ಅಭಿಮಾನಿ. ಅವರು ನನಗೆ ಆದರ್ಶ. ಇಂದು ಆತ್ಮೀಯರಾದ ಶ್ರೀಮುರಳಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಲ್ಲಿಯವರೆಗೆ ನೀವು ನೋಡಿರದ ಗುರುನಂದನ್ ನನ್ನು ಈ ಚಿತ್ರದಲ್ಲಿ ನೋಡಬಹುದು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಗುರುನಂದನ್ ತಿಳಿಸಿರು.
ಕಾಮಿಡಿ ಜನರ್ ನ ಈ ಚಿತ್ರದಲ್ಲಿ ನಾಯಕಿಯಾಗಿ ಮೃದುಲ ಹಾಗೂ ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.