ರಾಯಚೂರು: ಸಹಜ ಹೆರಿಗೆ ಮಾಡುವಲ್ಲಿ ಹೆಸರು ಪಡೆದ ಸೂಲಗಿತ್ತಿ ಮಲ್ಲಮ್ಮ ಎನ್ನುವವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸುತ್ತಿದೆ. ನಾಳೆ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತಿದ್ದು, ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು, ಬಿ.ಟಿ ಲಲಿತಾ ನಾಯಕ್, ಹೇಮಾ ಚೌದರಿ, ಎಂ ವೀರಪ್ಪ ಮೊಯಿಲಿ ಪ್ರಶಸ್ತಿಯನ್ನ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ಸಹಜ ಹೆರಿಗೆ ಮಾಡುವಲ್ಲಿ ಹೆಸರು ಪಡೆದ ಸೂಲಗಿತ್ತಿ ಮಲ್ಲಮ್ಮ ಎನ್ನುವರಿಗೂ ಪ್ರಶಸ್ತಿ ಒಲಿದು ಬಂದಿದೆ.
ನಿವಾಸಿ ಸೂಲಗಿತ್ತಿ ಮಲ್ಲಮ್ಮ ಅವರು ಮೂಲತಃ ರಾಯಚೂರಿನ ಕವಿತಾಳ ಪಟ್ಟಣದವರಾಗಿದ್ದು, ಈಗಲೂ ಸಹಜ ಹೆರಿಗೆ ಮಾಡುತ್ತಾರೆ. 40 ವರ್ಷಗಳಿಂದ ಮಲ್ಲಮ್ಮ ಸೂಲಗಿತ್ತಿ ಕೆಲಸ ಮಾಡಿಕೊಂಡು ಬರುತ್ತಿದ್ದು 20 ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆಗಳನ್ನು ಮಾಡಿದ್ದಾರೆ. ಹಾಗಾಗಿ ನಿಸ್ವಾರ್ಥ ಮಲ್ಲವ್ವನ ನಿಸ್ವಾರ್ಥ ಸೇವೆಯನ್ನ ಗಮನಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಲಾಗುತ್ತಿದೆ.