ತುಮಕೂರು : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ ನೀಡಲಾಗಿದ್ದು, ಕಳ್ಳಂಬೆಳ್ಳ ಠಾಣೆ ವ್ಯಾಪ್ತಿಯಲ್ಲಿ ಈ ಪೋಸ್ಕೋ ಪ್ರಕರಣ ನಡೆದಿದೆ. 20 ವರ್ಷ ಜೈಲು ಶಿಕ್ಷೆ 1.30 ಲಕ್ಷ ದಂಡ ವಿಧಿಸಲಾಗಿದೆ.ಈ ಪ್ರಕರಣವು 1-9_2022ರಲ್ಲಿ ನಡೆದಿದೆ. ಅಪರಾಧಿ ಹರೀಶ್ ಎಂಬ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಅಪರಾಧಿ ಹರೀಶ್ ಎಂಬ ವ್ಯಕ್ತಿ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಈ ಸಂಬಂಧ ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸ್ನ್ನ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್ ವಾದಿಸಿದ್ದರು.