12 ನವೆಂಬರ್ 2024 : ಕಾರ್ತಿಕ ಮಾಸದ ಮಂಗಳವಾರ ನವೆಂಬರ್ 12 ರಂದು ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಯಾವ-ಯಾವ ಫಲಗಳಿವೆ? ಗ್ರಹಗಳ ಸಂಚಾರ ಹಾಗೂ ಅದರ ಪ್ರಭಾವದ ಯಾವ ರೀತಿಯಲ್ಲಿದೆ? ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ತಿಳಿದುಕೊಳ್ಳಿ ಈ ದಿನದ ರಾಶಿ ಭವಿಷ್ಯದಲ್ಲಿ..
ಮೇಷ ರಾಶಿ :
ಈ ರಾಶಿಯವರಿಗೆ ಇಂದು ಶುಭದಿನ. ಆಸ್ತಿ, ವಾಹನ ಖರೀದಿಗೆ ಉತ್ತಮ ಸಮಯ ಇದಾಗಿದೆ. ಆದರೆ ಕೌಟುಂಬಿಕ ಜೀವನದಲ್ಲಿ ಹಲವು ಸಮಸ್ಯೆಗಳು ನಿಮ್ಮನ್ನ ಕಾಡಲಿವೆ. ಆದರೆ ವ್ಯಾಪಾರದಲ್ಲಿ ಲಾಭವಾಗಬಹುದು.
ವೃಷಭ ರಾಶಿ :
ವೃಷಭ ರಾಶಿಯವರಿಗೆ ಖರ್ಚು ಹೆಚ್ಚಾಗಿ, ಚಿಂತೆಗೀಡಾಗುವ ಸಾಧ್ಯತೆಗಳಿವೆ. ಸ್ತ್ರೀಯರಿಗೆ ಸಂಬಂಧಿಕರಿಂದ ಸಮಸ್ಯೆಯುಂಟಾಗಬಹುದು. ನಿಮ್ಮ ಪ್ರೀತಿಯ ಸಂಗಾತಿಯ ಜೊತೆ ಸುಮಧುರ ಸಮಯವನ್ನ ಕಳೆಯಲಿದ್ದೀರ. ಅಗತ್ಯಕ್ಕೆ ತಕ್ಕಷ್ಟೇ ಖರ್ಚುಗಳಿದ್ದರೆ ಉತ್ತಮ.
ಮಿಥುನ ರಾಶಿ :
ಈ ರಾಶಿಯವರು ವೈವಾಹಿಕ ಜೀವನದಲ್ಲಿ ಸಂತೋಷವನ್ನ ಕಾಣುತ್ತಾರೆ. ಸಂಬಂಧಗಳಲ್ಲಿ ಪ್ರೀತಿ, ಬಾಂಧವ್ಯ ಹೆಚ್ಚಾಗಲಿದೆ. ಇನ್ನೂ ನಿಮ್ಮ ವೃತ್ತಿಜೀವನದಲ್ಲಿ ಉನ್ನತಿಯನ್ನ ಕಾಣಲಿದ್ದೀರಿ. ಆದರೆ ನಿಮ್ಮ ಖರ್ಚುಗಳ ಕಡೆಗೆ ಕೊಂಚ ಗಮನ ಹರಿಸಿದರೆ ಉತ್ತಮ.
ಕರ್ಕಾಟಕ ರಾಶಿ :
ಈ ದಿನ ಯಾವುದೇ ರೀತಿಯ ಹಣದ ವ್ಯವಹಾರಗಳಿಂದ ದೂರವಿದ್ದರೆ ಒಳಿತು. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ಜೊತೆಗೆ ನಿಮ್ಮ ಮಾತನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ನೀವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
ಸಿಂಹ ರಾಶಿ :
ಹೊಸ ವ್ಯವಹಾರವನ್ನ ಆರಂಭಿಸುವವರಿಗೆ ಇಂದು ಶುಭದಿನ. ಆದರೆ ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನ ವಹಿಸಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನ ಕಾಣಲಿದ್ದೀರ. ವೃತ್ತಿಪರ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆ ಕಾಣಲಿದ್ದು, ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ.
ಕನ್ಯಾ ರಾಶಿ :
ಸೈದ್ಧಾಂತಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಹಾಗಾಗಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಕೆಲಸದ ಸ್ಥಳಗಳಲ್ಲಿ ನಿಮಗೆ ಸಿಹಿ ಸುದ್ದಿ ದೊರಕಲಿದೆ.
ತುಲಾ ರಾಶಿ :
ಈ ದಿನ ನಿಮಗೆ ಶುಭದಿನವಾಗಿದ್ದು, ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹ ಹೆಚ್ಚಾಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕುಟುಂಬದೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಉತ್ತಮ ಸಲಹೆಗಳು ದೊರಕಬಹುದು.
ವೃಶ್ಚಿಕ ರಾಶಿ :
ಹೊಸ ಉದ್ಯೋಗಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಸ್ಥಳಗಳಲ್ಲಿ ವಿರೋಧಿಗಳು ಸಕ್ರಿಯರಾಗಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಉತ್ತಮ. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.
ಧನಸ್ಸು ರಾಶಿ :
ಈ ದಿನ ನಿಮ್ಮ ಜೀವನದ ಎಲ್ಲಾ ಸವಾಲುಗಳನ್ನ ಧೈರ್ಯದಿಂದ ಎದುರಿಸುತ್ತೀರ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಡವನ್ನ ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಆಪ್ತ ಸ್ನೇಹಿತರ ಸಹಾಯದಿಂದ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ. ತಾಳ್ಮೆ ಕಾಪಾಡಿಕೊಳ್ಳಿ.. ಜೊತೆಗೆ ಆರೋಗ್ಯದ ಕಡೆಗೆ ಗಮನವನ್ನ ಹರಿಸಿ.
ಮಕರ ರಾಶಿ :
ಈ ದಿನ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಿರುತ್ತದೆ. ಹಣಕಾಸಿನ ವ್ಯವಹಾರಗಳನ್ನ ಬುದ್ಧಿವಂತಿಕೆಯಿಂದ ನಿಭಾಯಿಸಿ. ಕೆಲಸದ ಸ್ಥಳದಲ್ಲಿ ನೀವು ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು. ಹೊಸ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ.
ಕುಂಭ ರಾಶಿ :
ಈ ರಾಶಿಯವರಿಗೆ ಈ ದಿನ ಅಶುಭ. ಬದುಕಿನಲ್ಲಿ ನಿರಾಸೆ ಉಂಟಾಗಬಹುದು. ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಗೊಂದಲಕ್ಕೊಳಗಾಗಬಹುದು. ಆದರೆ ನಿಶ್ಚಿಂತರಾಗಿರಿ ಯಾಕೆಂದರೆ, ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ.
ಮೀನ ರಾಶಿ :
ಈ ದಿನ ಮೀನ ರಾಶಿಯವರಿಗೆ ಸಾಮಾನ್ಯ ದಿನವಾಗಿರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳು ನಿಮ್ಮನ್ನ ಅರಸಿ ಬರಲಿವೆ. ಅಗತ್ಯ ಗೃಹೋಪಯೋಗಿ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಇಂದು ಯೋಗ್ಯವಾದ ದಿನವಾಗಿದೆ. ಆದಷ್ಟು ಬೇಗನೇ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.