ಇನ್ನೇನು ಬೆಳಗಾವಿ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ಹೀಗಾಗಿ ಅಧಿವೇಶನದಲ್ಲಿ ಚಚಿಸಬಹುದಾದ ವಿಷಯಗಳ ಬಗ್ಗೆ ಚರ್ಚಿಸಲು, ವಿಪಕ್ಷ ನಾಯಕ ಆರ್. ಅಶೋಕ್ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರಿಗೆ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಪ್ರತಿ ಬಾರಿ ಕಲ್ಯಾಣ ಭಾಗದ ಸಮಸ್ಯೆಗಳ ಚರ್ಚೆಗೆ ಯಾವುದೇ ಸರ್ಕಾರ ಒತ್ತು ನೀಡಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಬೆಳಗಾವಿಯಲ್ಲಿ ಅಧಿವೇಶನ ನೀಡಿದ್ರು ಆ ಭಾಗದ ಜನರಿಗೆ ನ್ಯಾಯ ಸಿಗಲ್ಲ ಎಂಬ ಆರೋಪವು ಇದೆ.. ಕಳೆದ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರು ಪ್ರತಿಭಟನೆ ಕೂಡ ಮಾಡಿದ್ರು.. ಹೀಗಾಗಿ ವಿಪಕ್ಷ ನಾಯಕರೇ ತಮ್ಮ ಶಾಸಕರನ್ನ ಕರೆದು ಮಾಹಿತಿ ಪಡೆಯಲು ಮುಂದಾಗಿದ್ದಾರೆ.