ಕರ್ನಾಟಕ

ಕಾಂಗ್ರೆಸ್‌ ಆಡಳಿತದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ - R. ಅಶೋಕ್‌

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಿದ್ಧವಾಗುತ್ತಿದೆ.. ಕೈ ಪಡೆ ಕಟ್ಟಿಹಾಕುವ ಸಂಬಂಧ ಮಹತ್ವದ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ..

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಿದ್ಧವಾಗುತ್ತಿದೆ.. ಕೈಪಡೆ ಕಟ್ಟಿಹಾಕುವ ಸಂಬಂಧ ಮಹತ್ವದ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ.. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅಂತಾ ವಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.. ಬೆಳಗಾವಿ ಅಧಿವೇಶನಲ್ಲಿ ಚರ್ಚಿಸಬೇಕಾದ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದ್ದೇವೆ, ಅಧಿವೇಶನದಲ್ಲಿ ಸರ್ಕಾರ ಈ ಹಿಂದೆ ಹೇಳಿದ್ದೇನು, ಅಭಿವೃದ್ಧಿಗಾಗಿ ಖರ್ಚು ಮಾಡಿದ್ದೆಷ್ಟು? ಕೊಟ್ಟಿದ್ದೆಷ್ಟು ಅಂತ ಅಂಕಿ-ಅಂಶ ಸಹಿತ ಚರ್ಚೆ ಮಾಡ್ತೇವೆ ಎಂದಿದ್ದಾರೆ.. ಕಳೆದ ಒಂದೂವರೆ ವರ್ಷದಿಂದ ಉತ್ತರ ಕರ್ನಾಟಕಕ್ಕೆ ಎಷ್ಟು ಯೋಜನೆ ಸಿಕ್ಕಿದೆ, ಯಾವ ಕೈಗಾರಿಕೆ ಶುರು ಮಾಡಿದ್ದಾರೆ..? ಅಂತಾ ಪ್ರಶ್ನಿಸುತ್ತೇವೆ.. ಅಷ್ಟೇ ಅಲ್ಲ ಅಬಕಾರಿ ಇಲಾಖೆ 700 ಕೋಟಿ ಅಕ್ರಮ ಬಗ್ಗೆ ಚರ್ಚೆ ಮಾಡ್ತೇವೆ, ಆಡಿಯೋ ಸಾಕ್ಷ್ಯ ಇದೆ,, ಇನ್ನೇನು ದಾಖಲೆ ಬೇಕು ಅಂತ ರಾಜ್ಯ ಸರ್ಕಾರವನ್ನ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ..