ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ ಅಮಿತ್ ಶಾ ಪರ, ವಿಪಕ್ಷ ನಾಯಕ ಆರ್. ಅಶೋಕ್ ಬ್ಯಾಟಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಗೆ ಅಂಬೇಡ್ಕರ್ ಬಗ್ಗೆ ಗೌರವ, ಅಭಿಮಾನ ಇಲ್ಲ..ಅಂಬೇಡ್ಕರ್ ಗೆ ಭಾರತ ರತ್ನ ತಪ್ಪಿಸಿದ್ದು ಕಾಂಗ್ರೆಸ್..ನೆಹರೂ ಅವರು ಒಮ್ಮೆಯೂ ಅಂಬೇಡ್ಕರ್ ಫೋಟೋ ಹಿಡಿಯಲಿಲ್ಲ, ಅಂಬೇಡ್ಕರ್ ರನ್ನು ಹೊಗಳಲಿಲ್ಲ..ಈಗ ಓಟ್ ಪಾಲಿಟಿಕ್ಸ್ ಗಾಗಿ ಅಂಬೇಡ್ಕರ್ ಫೋಟೋ ಹಿಡೀತಾರೆ..ಕಾಂಗ್ರೆಸ್ ಅಂಬೇಡ್ಕರ್ ಹೆಸರಲ್ಲಿ ರಾಜಕಾರಣ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ, ಡ್ಯಾಮೇಜ್ ಕಂಟ್ರೋಲ್ ಪ್ರಶ್ನೆಯೂ ಇಲ್ಲ..ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಸ್ಮಾರಕ ಮಾಡಿದವರು ನಾವು..ನಾವು ಅಂಬೇಡ್ಕರ್ ವಾದಿಗಳು, ಕಾಂಗ್ರೆಸ್ ನವ್ರು ಅಂಬೇಡ್ಕರ್ ಪಾರ್ಥಿವ ಶರೀರ ಹೂಳಲು ಅವಕಾಶ ಕೊಡಲಿಲ್ಲ ಎಂದು ಕಿಡಿ ಕಾರಿದ್ದಾರೆ.