ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 17 ತಿಂಗಳಾಯ್ತು ಇನ್ನು ಅಭಿವೃದ್ಧಿ ಮಾಡಿಲ್ಲ.17 ಅವಾಂತರಗಳನ್ನು ಮಾಡಿಕೊಂಡಿದೆ ಎಂದು, ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಡಾ, ವಾಲ್ಮೀಕಿ, ಲಿಕ್ಕರ್ ಸ್ಕ್ಯಾಮ್, ಮೆಡಿಕಲ್ ಲಾಬಿ, ವಕ್ಫ್ ಬೋರ್ಡ್ ಅವಾಂತರ ಒಂದಲ್ಲ ಎರಡಲ್ಲ ಎಂದು ಕಾಲೆಳೆದಿದ್ದಾರೆ.
ಅಲ್ಲದೇ ಸ್ವತಃ ಸಿದ್ದರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ..ಇಡೀ ಸರ್ಕಾರವೇ ನಿದ್ದೆ ಮಾಡ್ತಾ ಇದೆ, ನಿದ್ದೆರಾಮಯ್ಯ ಆಗಿದ್ದಾರೆ..ಸಿಎಂ ಸಿದ್ದರಾಮಯ್ಯಗೆ ಇಲಾಖೆಗಳ ಮೇಲೆ ಹಿಡಿತ ತಪ್ಪಿದೆ..ಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗಿದೆ..ಬೆಳಗಾವಿಯಲ್ಲಿ 325 ಶಿಶುಗಳ ಮರಣವಾಗಿದೆ..ಎಲ್ಲಾ ಇಲಾಖೆಯಲ್ಲಿ ಆಡಳಿತದ ಹಿಡಿತ ಇಲ್ಲ ಸಿದ್ದರಾಮಯ್ಯ ಅವರಿಗೆ..ಎಲ್ಲಾ ಮಂತ್ರಿಗಳು ದುಡ್ಡು ಮಾಡಲು ಹೊರಟಿದ್ದಾರೆ..ಎಂದು ಆರೋಪ ಮಾಡಿದ್ದಲ್ಲದೇ, ಇದು ಗುರುವಾರದ ಸರ್ಕಾರವಾಗಿದೆ. ಗುರುವಾರ ಮಾತ್ರ ಎಲ್ಲ ವಿಧಾನಸೌಧಕ್ಕೆ ಬರ್ತಾರೆ ಎಂದಿದ್ದಾರೆ.