ಬೆಂಗಳೂರು - ಗೋದಾವರಿ-ಕಾವೇರಿ- ಕೃಷ್ಣ ನದಿ ಜೋಡಣೆ ವಿಚಾರವಾಗಿ ಸಂಸತ್ ನಲ್ಲಿ ಮಾತನಾಡಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ತಿಳಿಸಿದರು. ಬೆಂಗಳೂರಿನಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿ , ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ೨೫ TMC ನೀರು ನಮಗೆ ಕೊಡಬೇಕು. ಇದಕ್ಕೆ ಬೇಕಾದ ಹೋರಾಟ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಜೊತೆ ಮಾತಾಡೋಕೆ ಸಿದ್ದ ಹಾಗೂ ಕಾಂಗ್ರೆಸ್ ನ ನೀರಾವರಿ ಮಂತ್ರಿ, ಕಾಂಗ್ರೆಸ್ ಎಂಪಿಗಳ ಜೊತೆ ಮಾತಾಡೋಕು ಸಿದ್ದವಾಗಿದ್ದಿನಿ. ಬಿಜೆಪಿ ಎಂಪಿಗಳ ಜೊತೆಯೂ ಮಾತಾಡುತ್ತಿನಿ. ರಾಜಕೀಯ ಬಿಟ್ಟು ನೀರಿಗಾಗಿ ನಾನು ಎಲ್ಲರ ಜೊತೆಗೂ ಮಾತಾಡೋಕೆ ಸಿದ್ದವಾಗಿದ್ದಿನಿ. ಇನ್ನೂ ಸಿದ್ದರಾಮಯ್ಯ-ಡಿಕೆಶಿ-ಕಾಂಗ್ರೆಸ್ ಎಂಪಿಗಳ ಜೊತೆ ಮಾತುಕತೆಗೆ ಸಿದ್ದ ಎಂದ ದೇವೇಗೌಡರು ತಿಳಿಸಿದರು.
ಇನ್ನೂ , ಕುಮಾರಸ್ವಾಮಿ ಮೋದಿ ಗಮನಕ್ಕೆ ತರುತ್ತಾರೆ. ಜೋಷಿ ಮೋದಿ ಅವರ ಗಮನಕ್ಕೆ ತರುತ್ತಾರೆ. ಪ್ರಧಾನಿಗಳ ಜೊತೆ ಉತ್ತಮ ಸಂಬಂಧ ನನಗೆ ಇದೆ. ಅವರ ಜೊತೆ ಮಾತನಾಡ್ತೇನೆ ಎಂದರು.
ಜೊತೆಗೆ , ಮೇಯಲ್ಲಿ ಜೆಡಿಎಸ್ ನಿಂದ ದೊಡ್ಡ ಸಮಾವೇಶ ನಡೆಯಲಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸಮಾವೇಶ ಮಾಡಲಾಗುತ್ತದೆ. ಕಾಂಗ್ರೆಸ್ ಹಾಸನದಲ್ಲಿ ಸಮಾವೇಶ ಮಾಡಿದ್ದರೂ , ನಾವು ಕೂಡಾ ಸಮಾವೇಶ ಮಾಡುತ್ತೇವೆ . ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮಾರ್ಚ್ ೬ ರಂದು ಪೂರ್ವಭಾವಿ ಸಭೆ ಮಾಡುತ್ತೇವೆ . ಎಲ್ಲಾ ಜಿಲ್ಲಾ, ತಾಲೂಕು ಅಧ್ಯಕ್ಷರು ಭಾಗಿಯಾಗುತ್ತಾರೆ. ಹಾಲಿ, ಮಾಜಿ, ಶಾಸಕರು, ಸಚಿವರು, ಸಂಸದಸರು ಭಾಗಿಯಾಗುತ್ತಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಸಮಾವೇಶ ಎಲ್ಲಿ ಮಾಡಬೇಕು ತೀರ್ಮಾನ ಮಾಡ್ತೇವೆ ಎಂದರು.
ಇದೇ ವೇಳೆ ಕರ್ನಾಟಕದಲ್ಲಿ ಅತ್ಯಂತ ಭಷ್ಟ ಸರ್ಕಾರ ಇದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ , ನಾನು ಯಾವ ಹಿನ್ನಲೆಯಲ್ಲಿ ಹೇಳಿದೆ ಅಂತ ನೋಡಿ. ಕಾಂಗ್ರೆಸ್ ನ ಎಂಪಿ ಒಬ್ಬರು ನನ್ನನ್ನ ಅಟ್ಯಾಕ್ ಮಾಡೋಕೆ ನೋಡಿದರೂ , ಆಗ ನಾನು ಮಾತನಾಡಿದೆ ಎಂದು ದೇವೇಗೌಡರು ಸ್ಪಷ್ಟನೆ ನೀಡಿದರು.