ತಂತ್ರಜ್ಞಾನ

ನಾಲ್ಕೈದು ನಿಮಿಷದಲ್ಲೇ ಮೊಬೈಲ್ ಚಾರ್ಜ್ ಫುಲ್.. ರಿಯಲ್ ಮಿ ಕಂಪನಿಯಿಂದ ಹೊಸ ಪ್ರಯತ್ನ

ಸ್ಮಾರ್ಟ್ಫೋನ್ ಕಂಪನಿಯಾದ ರಿಯಲ್ ಮಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಕೇವಲ ನಾಲ್ಕೈದು ನಿಮಿಷದಲ್ಲಿ ಮೊಬೈಲ್ ಚಾರ್ಜ್ ಫುಲ್ ಮಾಡುವ, 320 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನು ಪರಿಚಯಿಸಿದೆ. ಆದ್ರೆ ರಿಯಲ್ಮಿಯ ಯಾವ ಮೊಬೈಲ್ನಲ್ಲಿ, ಈ ವಿಶೇಷ ಫೀಚರ್ ಲಭ್ಯವಾಗಲಿದೆ ಅನ್ನೋದನ್ನ ಇನ್ನೂ ತಿಳಿಸಿಲ್ಲ.

ಈಗಂತೂ ಸ್ಮಾರ್ಟ್ಫೋನ್ ಯುಗ. ಹೊಸ ಹೊಸ ಫೀಚರ್ಸ್ ಜೊತೆ ಹೊಸ ಹೊಸ ಮೊಬೈಲ್ಗಳು ಮಾರ್ಕೆಟ್ಗೆ ಲಗ್ಗೆ ಇಡುತ್ತಿರುತ್ತವೆ. ಗ್ಯಾಜೆಟ್ಸ್ ಫ್ರೀಕ್ ಇರುವ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡೋದಕ್ಕೆ, ಸ್ಮಾರ್ಟ್ಫೋನ್ ಕಂಪನಿಗಳು ಒಂದಲ್ಲಾ ಒಂದು ಹೊಸ ರೀತಿಯ ಪ್ರಯತ್ನಗಳನ್ನ ಮಾಡುತ್ತವೆ. ಹಾಗೇನೆ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ ರಿಯಲ್ ಮಿ ಕೂಡ, ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಕೇವಲ ನಾಲ್ಕೈದು ನಿಮಿಷದಲ್ಲಿ ಮೊಬೈಲ್ ಚಾರ್ಜ್ ಫುಲ್ ಮಾಡುವ, 320 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನು ಪರಿಚಯಿಸಿದೆ. ಆದ್ರೆ ರಿಯಲ್ಮಿಯ ಯಾವ ಮೊಬೈಲ್ನಲ್ಲಿ, ಈ ವಿಶೇಷ ಫೀಚರ್ ಲಭ್ಯವಾಗಲಿದೆ ಅನ್ನೋದನ್ನ ಇನ್ನೂ ತಿಳಿಸಿಲ್ಲ.

ಇನ್ನು ಹೈಸ್ಪೀಡ್ ಚಾರ್ಜಿಂಗ್ ಫೀಚರ್, ಕೆಲ ವರ್ಷಗಳ ಹಿಂದೆಯೇ ಬಂದಿದೆ. ಆದ್ರೆ ರಿಯಲ್ಮಿ ಕಂಪನಿಯು ಚಾರ್ಜಿಂಗ್ ಸ್ಪೀಡ್ ಲಿಮಿಟ್ನ ಹೆಚ್ಚಿಸಿದೆ. ಅಂದರೆ ರಿಯಲ್ಮಿ GT ಸರಣಿ ಸ್ಮಾರ್ಟ್ಫೋನ್ಗಳ, ಚಾರ್ಜಿಂಗ್ ಸೌಲಭ್ಯ 240 ವ್ಯಾಟ್ ಇತ್ತು. ಆದರೀಗ ರಿಯಲ್ಮಿ ಕಂಪನಿ 320 ವ್ಯಾಟ್ನಷ್ಟು ಚಾರ್ಜಿಂಗ್ ಸೌಲಭ್ಯ ಕೊಡಲು ಮುಂದಾಗಿದೆ.. ಸದ್ಯದಲ್ಲೇ ಯಾವ ಸಾಧನದಲ್ಲಿ ವೇಗದ ಚಾರ್ಜಿಂಗ್ ವೈಶಿಷ್ಟ್ಯ ಪರಿಚಯಿಸಲಿದೆ ಎಂದು ರಿಯಲ್ಮಿ ಹೇಳಲಿದೆ. ಈ ಚಾರ್ಜಿಂಗ್ ವ್ಯವಸ್ಥೆಯಿಂದ ಒಂದು ಮೊಬೈಲ್ ಫೋನ್ನ, 0 ಯಿಂದ 100 ಪರ್ಸೆಂಟ್ವರೆಗೂ ಕೇವಲ ನಾಲ್ಕೇ ನಿಮಿಷದಲ್ಲಿ ಚಾರ್ಜ್ ಮಾಡಬಹುದು.