ಮಂಡ್ಯ : ರಾಜ್ಯ ಬಿಜೆಪಿಯ ಬಣಬಡಿದಾಟ ಈಗ ಜಗಜ್ಜಾಹೀರ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗದ್ದಲ ದಿನದಿಂದ ತಾರಕಕ್ಕೇರುತ್ತಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಲು ರೆಬಲ್ ಲೇಡಿ , ಮಾಜಿ ಸಂಸದೆ ಸುಮಲತಾ ಅಂಬರೀಶ್ ನಕಾರಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ ಗದ್ದಲದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಅದನ್ನ ಸರಿ ಪಡಿಸಲು ವರಿಷ್ಠರಿದ್ದಾರೆ. ನಾನು ಇದರಲ್ಲಿ ಇನ್ವಾಲ್ವ್ ಆಗೋದು ಸರಿಯಲ್ಲ ಎಂದು ಹೇಳಿದ್ದಾರೆ.