ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಯತ್ನಾಳ್ & ಟೀಂ,, ನಾಳೆ ದೆಹಲಿಗೆ ತೆರಳುತ್ತಿದೆ.. ಇದಕ್ಕೂ ಮುನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಟೆಂಪಲ್ ರನ್ ಮಾಡಿದ್ದಾರೆ.. ರೆಬೆಲ್ಸ್ ನಾಯಕರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.. ಕೈಗೊಂಡ ಕಾರ್ಯದಲ್ಲಿ ಜಯ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.. ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಕೆಲ ಪ್ರಮುಖರ ಜೊತೆಯೂ ಮಹತ್ವದ ಸಭೆ ನಡೆಸಿದ್ದಾರೆ.. ನಾಳೆ ದೆಹಲಿಗೆ ತೆರಳಲಿರುವ ರೆಬೆಲ್ಸ್ ನಾಯಕರು ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಮೀಟಿಂಗ್ ನಡೆಸಲಿದ್ದಾರೆ.. ಬಿ.ವೈ. ವಿಜಯೇಂದ್ರ ವಿರುದ್ಧ ಯಾರು ಕಣಕ್ಕೆ ಇಳಿಯಬೇಕು ಎಂದು ಚರ್ಚೆ ನಡೆಸಲಿದ್ದು, ದೆಹಲಿಯಿಂದಲೇ ತಮ್ಮ ಬಣದ ಅಭ್ಯರ್ಥಿ ಯಾರು ಎಂದು ಘೋಷಿಸುವ ಸಾಧ್ಯತೆ ಇದೆ..