ಕಿರುತೆರೆಯಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದೆ. ಸದ್ಗುಣ - ಸಂಪ್ರದಾಯಸ್ಥ ನರ್ಮಲ್ ಯುವತಿ ಮದುವೆ ಆಗಿ ಎರಡು ಮಕ್ಕಳಾದ ಮೇಲೆ ತನ್ನ ಗಂಡನಿಗೆ ಬೇಡವಾಗುತ್ತಾಳೆ. ಮಾಡ್ರನ್ ಲುಕ್ ಹುಡುಗಿಗಾಗಿ ಭಾಗ್ಯ ಜೊತೆ ಮಕ್ಕಳು ಹಾಗೇ ಅಮ್ಮ , ಅಪ್ಪ ಎಲ್ಲರನ್ನ ಬಿಟ್ಟು ಬಿಡುತ್ತಾನೆ ಈ ಸೀರಿಯಲ್ ಹೀರೋ . ಈ ಬಿಡುವಿನ ಪ್ರಯತ್ನದಲ್ಲಿ ಬೇರೆ ಯುವತಿಯೊಂದಿಗೆ ವಿವಾಹ ಆಗಲು ಹೆಂಡತಿಯನ್ನೇ ಬ್ಲ್ಯಾಕ್ ಮೇಲ್ ಮಾಡಿ ಡೈವರ್ಸ್ ಪೇಪರ್‌ಗೂ ಸಹಿ ಹಾಕಿಸಿಕೊಳ್ಳುತ್ತಾನೆ. ಅತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಹೀರೋ ತನ್ನ ಗರ್ಲ್ ಫ್ರೆಂಡ್ ಜೊತೆ ವಿವಾಹ ಆಗಲು ಗಡಿ ಬಿಡಿ ಮಾಡುತ್ತಾನೆ. ಆಗಲೇ ಕಥೆಗೆ ಟ್ವಿಸ್ಟ್ ಇರುವಂತೆ ಭಾಗ್ಯಲಕ್ಷ್ಮೀ ತನ್ನ ಗಂಡನ ಮನೆಗೆ ಪೊಲೀಸ್ರ ಜೊತೆಗೆ ಎಂಟ್ರಿ ಕೊಟ್ಟು ಡೈವರ್ಸ್ ಸಿಗುವವರೆಗೂ ಬೇರೆ ವಿವಾಹ ಆಗಲು ಬಿಡಲು ತಾನು ತನ್ನ ಕುಟುಂಬದವರು ಗಂಡನ ಮನೆಯಲ್ಲೇ ಟೀಕಾಣಿ ಹುಡುತ್ತಿನಿ ಅನ್ನುವುದನ್ನ ಪಕ್ಕಾ ಮಾಡುತ್ತಾರೆ. ಈ ಸೀರಿಯಲ್ ಕಥೆ ಸನ್ನಿವೇಶಕ್ಕೆ ತಗ್ಗಿ -ಬಗ್ಗಿ ನಡೆಯುವ ಮಹಿಳೆ ಸಮಯ ಬಂದಾಗ ಹೇಗೆ ತಿರುಗಿ ಬೀಳುತ್ತಾಳೆ ಎನ್ನುವುದನ್ನ ಸಾಕ್ಷಿ ಆಗಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದೆ.
ಪ್ರೀತಂ ಗುಬ್ಬಿ ಕನ್ನಡ ಖ್ಯಾತ ನಿರ್ದೇಶಕ
ಭಾಗ್ಯ ಲಕ್ಷ್ಮೀ ಸೀರಿಯಲ್ ಕಥೆ ಎಷ್ಟು ಕುತೂಹಲ ಹುಟ್ಟಿಸುತ್ತಿದ್ದೆಯೋ ? ಹಾಗೇ ಈ ಭಾಗ್ಯಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿರುವ ಸುಷ್ಮಾ ಕೆ. ರಾವ್ ರೀಲ್ ಕಥೆಯೂ ಹೆಚ್ಚು ಇಂಟ್ರೆಸ್ಟಿಂಗ್ ಆಗಿದೆ. ಹೌದು , ಸೀರಿಯಲ್ ಭಾಗ್ಯ , ನಿಜ ಜೀವನದ ಸುಷ್ಮಾ ರಿಯಲ್ ಲೈಫ್‌ನಲ್ಲಿ ಮುಂಗಾರು ಮಳೆ ಸಿನಿಮಾದ ಕಥೆ ಬರೆದಿದ್ದ ಪ್ರೀತಂಗುಬ್ಬಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ಕಾಲನಂತರದಲ್ಲಿ ಇಬ್ಬರು ವಿಚ್ಛೇಧನ ಪಡೆಯದೇ ಪ್ರತ್ಯೇಕವಾಗಿದ್ದಾರೆ. ಇನ್ನೂ , ಯಾವ ವೇದಿಕೆಯಲ್ಲೂ ೧೧ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಪ್ರೀತಂ ಗುಬ್ಬಿಯಾಗಲೀ , ಕಳೆದ ೧೩ ವರ್ಷಗಳಿಂದ ಸೀರಿಯಲ್ ಕ್ಷೇತ್ರದಲ್ಲಿ ಭಾವನಾ , ಭಾಗ್ಯಲಕ್ಷ್ಮೀ ಆಗಿ ಗುರುತಿಸಿಕೊಂಡಿರುವ ಸುಷ್ಮಾ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿಲ್ಲ.
ನಟನೆಯಲ್ಲಿ ೨ ವರ್ಷ ಬ್ರೇಕ್ ಪಡೆದಿದ್ದ ಭಾಗ್ಯ ತಮ್ಮ ಖಾಸಗೀ ಬದುಕಿನ ಏಳು -ಬೀಳುಗಳಿಂದ ಮೇಲೆ ಎದ್ದೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಚರ್ಚೆಯೂ ಇದೆ. ಹಾಗೇ ಮನಸ್ತಾಪದಿಂದಾಗಿ ಇಬ್ಬರೂ ದೂರವಾಗಿ ವಾಸವಾಗಿದ್ದಾರೆ ಎಂಬ ಮಾತು ಇದೆ. ಆದರೆ , ಈ ವರೆಗೂ ಇಬ್ಬರು ತಮ್ಮ ಬದುಕಿನ ಕಹಿ ವಿಚಾರಗಳ ಬಗ್ಗೆ ಎಲ್ಲೂ ಹೇಳಿಕೊಳ್ಳದೇ ಯಾರಿಗೂ ನಿಜಕ್ಕೂ ಏನು ನಡೆದಿದೆ ಎಂಬ ಬಗ್ಗೆ ಕ್ಲಾರಿಟಿ ಇಲ್ಲ.
ನಿರೂಪಕಿ , ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಗಳಿಸಿರುವ ನಟಿಗೆ ನಿಜ ಜೀವನದಲ್ಲೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಿಗಲಿ ಅನ್ನುವುದು ಅಭಿಮಾನಿಗಳ ಆಶಯ.