ದೇಶ

ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ..!

ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ತೊಡೆತಟ್ಟಿ ಗೆದ್ದಿದ್ದ ಪರ್ವೇಶ್‌ ವರ್ಮ ಅವರನ್ನ ಮುಖ್ಯಂಂತ್ರಿಯಾಗಿ ಆಯ್ಕೆ ಮಾಡಲಾಗುವುದು ಎಂಬ ಚರ್ಚೆ ಶುರುವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ದಿಲ್ಲಿ ಗದ್ದುಗೆ ಏರಲು ರೇಖಾ ಗುಪ್ತಾ ಅವರ ಹೆಸರನ್ನ ಘೋಷಿಸಲಾಗಿದೆ.

ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್‌ ಹಿರಿಯ ನಾಯಕಿ ರೇಖಾ ಗುಪ್ತಾ ಅವರನ್ನ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ನಾಯಕರು ಬನಿಯಾ ಸಮುದಾಯದವರನ್ನು ಸಿಎಂ ಆಗಿ ಆಯ್ಕೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದರಂತೆ ಬುನಿಯಾ ಸಮುದಾಯದ ರೇಖಾ ಗುಪ್ತಾ ಅವರನ್ನ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದು, ಮಧ್ಯಾಹ್ನ 12.30ಕ್ಕೆ ಪ್ರಮಾಣವಚನವನ್ನ ಸ್ವೀಕರಿಸಲಿದ್ದಾರೆ. 

ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ತೊಡೆತಟ್ಟಿ ಗೆದ್ದಿದ್ದ ಪರ್ವೇಶ್‌ ವರ್ಮ ಅವರನ್ನ ಮುಖ್ಯಂಂತ್ರಿಯಾಗಿ ಆಯ್ಕೆ ಮಾಡಲಾಗುವುದು ಎಂಬ ಚರ್ಚೆ ಶುರುವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ದಿಲ್ಲಿ ಗದ್ದುಗೆ  ಏರಲು ರೇಖಾ ಗುಪ್ತಾ ಅವರ ಹೆಸರನ್ನ ಘೋಷಿಸಲಾಗಿದೆ. 

ರೇಖಾ ಗುಪ್ತ ಮೊಟ್ಟ ಮೊದಲ ಬಾರಿಗೆ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ  ಚುನಾವಣೆಯಲ್ಲಿ ಗೆದ್ದಿದ್ದು, ಅವರ ಅದೃಷ್ಟ ಕುಲಾಯಿಸಿದೆ.