ವೈರಲ್

ರೇಣುಕಾಸ್ವಾಮಿ ಕೊಲೆ ಕೇಸ್; ಖಾಕಿ ಕೈಸೇರಿದೆ ಮಹತ್ವದ ಸಾಕ್ಷಿ.. ಆರೋಪಿಗಳಿಗೆ ಕೂದಲೇ ಕಂಟಕವಾಯ್ತಾ?

ಕಾರಿನಲ್ಲಿ ರೇಣುಕಾಸ್ವಾಮಿಯ ಮೃತ ದೇಹವನ್ನ ಸಾಗಾಟ ಮಾಡಿರುವುದು ದೃಢಪಟ್ಟಿದೆ. ಇದೀಗ FSL ರಿಪೋರ್ಟ್​ ಕೂಡ ಪೊಲೀಸರ ಕೈ ಸೇರಿದ್ದು, ಕಾರಿನಲ್ಲಿ ಪತ್ತೆಯಾಗಿರುವುದು ಆರೋಪಿಗಳಾದ ನಿಖಿಲ್​, ರಾಗವೇಂದ್ರ, ಕಾರ್ತಿಕ್ ಅವರದ್ದೇ ಕುದಲು ಎನ್ನುವುದು ಸಾಬೀತಾಗಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲುಸೇರಿದ್ದಾರೆ. ಇತ್ತ  ಪ್ರಕರಣ ದಿನಕ್ಕೊಂದು ಹೊಸಹೊಸ ತಿರುವನ್ನ ಪಡೆದುಕೊಳ್ಳುತ್ತಿದ್ದು, ಬಗೆದಷ್ಟು ಪ್ರಕರಣ ಸಾಕ್ಷ್ಯಗಳು ಒಂದೊಂದೇ ಹೊರ ಬರುತ್ತಿವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಹೊರಬಿದ್ದಿದೆ.

ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ ಬಳಿಕ ಮೃತದೇಹವನ್ನ ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಕಾರಿನಲ್ಲಿ ಸಾಗಾಟ ಮಾಡಿದ್ದರು. ಈ ಸಂಬಂಧ  ಕಾರಿನಲ್ಲಿ ಪರಿಶೀಲನೆ ಮಾಡುವಾಗ ಪೊಲೀಸರಿಗೆ  ಆರೋಪಿಗಳ ಕೂದಲು ಪತ್ತೆಯಾಗಿತ್ತು. ಈ ಬಗ್ಗೆ ಕೆಲವು ಮಾಹಿತಿಗಳನ್ನ ಸಂಗ್ರಹಿಸಿದ ಪೊಲೀಸರು, ಕೂದಲು ಮಾದರಿಯನ್ನ ಪರೀಕ್ಷೆಗೆಂದು ಎಫ್ ಎಸ್ಎಲ್ಗೆ ಕಳುಹಿಸಿದ್ದರು.

ಸದ್ಯ ಎಫ್ಎಸ್ಎಲ್ನಿಂದ ಮಾಹಿತಿ ಹೊರ ಬಂದಿದ್ದು, ಕಾರಿನಲ್ಲಿ ರೇಣುಕಾಸ್ವಾಮಿಯ ಮೃತ ದೇಹವನ್ನ ಸಾಗಾಟ ಮಾಡಿರುವುದು ದೃಢಪಟ್ಟಿದೆ. ಇದೀಗ ಎಫ್ಎಸ್ಎಲ್ ರಿಪೋರ್ಟ್ ಕೂಡ ಪೊಲೀಸರ ಕೈ ಸೇರಿದ್ದು, ಕಾರಿನಲ್ಲಿ ಪತ್ತೆಯಾಗಿರುವುದು ಆರೋಪಿಗಳಾದ ನಿಖಿಲ್, ರಾಗವೇಂದ್ರ, ಕಾರ್ತಿಕ್ ಅವರದ್ದೇ ಕುದಲು ಎನ್ನುವುದು ಸಾಬೀತಾಗಿದೆ. ಇದರಿಂದಾಗಿ ಆರೋಪಿಗಳಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.