ಕರ್ನಾಟಕ

ಯತ್ನಾಳ್ ಬಸ್, ಟಿಪ್ಪರ್ ಕಂಡಕ್ಟರ್ ಆಗಿ ಟಿಕೆಟ್ ಹರೀತಿದ್ರು : ರೇಣುಕಾಚಾರ್ಯ

ಸಿದ್ದೇಶ್ವರ ಸಂಸ್ಥೆ ಕಟ್ಟಿದ್ದು ಸಂಜಯ ಪಾಟೀಲ್ ಕರಮಣಿ ಎಂಬ ಹಿರಿಯರು, ಸಿದ್ದೇಶ್ವರ್ ಅಲ್ಲ. ಯತ್ನಾಳ್ ಬಗ್ಗೆಯೂ ವಿಜಯಪುರದ ಹಲವರು ನನಗೆ ಮೆಸೇಜ್ ಮಾಡಿದ್ದಾರೆ. ಯತ್ನಾಳ್ ಬಸ್, ಟಿಪ್ಪರ್ ಕಂಡಕ್ಟರ್ ಆಗಿ ಟಿಕೆಟ್ ಹರೀತಿದ್ರು. ಆದ್ರೀಗ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಅಂತಾರೆ ಆದರೆ, ಯತ್ನಾಳ್ ನಿನಗೆ ವಯಸ್ಸಾಗಿಲ್ವಾ? ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ನಿನಗೆ ಏನಿದೆ ನೈತಿಕತೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದಿದ್ದಾರಷ್ಟೇ. ಆದ್ರೆ ಅವ್ರು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದು ಭಿನ್ನಮತೀಯ ನಾಯಕರ ವಿರುದ್ಧ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಸೊರಬದಲ್ಲಿ ಒಂದು ದಿನವೂ ಕುಮಾರ್ ಬಂಗಾರಪ್ಪ ಸದಸ್ಯತ್ವ ಅಭಿಯಾನ ನಡೆಸಿಲ್ಲ. ದಿಢೀರನೇ ಈಗ ಕುಮಾರ್ ಬಂಗಾರಪ್ಪ ರಾಷ್ಟ್ರೀಯ ನಾಯಕ ಆಗಲು ಹೊರಟಿದ್ದಾರೆ. ಹರಿಹರದಲ್ಲಿ ಬಿಪಿ ಹರೀಶ್ ಗೆ ಟಿಕೆಟ್ ಅಂತ ಘೋಷಣೆ ಮಾಡಿದ್ದೇ ನಾವು. ಬಿಪಿ ಹರೀಶ್ ಗೆದ್ದಿದ್ದು ಯಡಿಯೂರಪ್ಪ ಕೃಪಾ ಕಟಾಕ್ಷದಿಂದ. ಈಗ ಅವರು ಯಡಿಯೂರಪ್ಪ ವಿರುದ್ಧವೇ ಮಾತಾಡ್ತಿದ್ದಾರೆ, ಬಿಪಿ ಹರೀಶ್‌ಗೆ ಯಡಿಯೂರಪ್ಪ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಇನ್ನು ಸಿದ್ದೇಶ್ವರ ಸಂಸ್ಥೆ ಕಟ್ಟಿದ್ದು ಸಂಜಯ ಪಾಟೀಲ್ ಕರಮಣಿ ಎಂಬ ಹಿರಿಯರು, ಸಿದ್ದೇಶ್ವರ್ ಅಲ್ಲ. ಯತ್ನಾಳ್ ಬಗ್ಗೆಯೂ ವಿಜಯಪುರದ ಹಲವರು ನನಗೆ ಮೆಸೇಜ್ ಮಾಡಿದ್ದಾರೆ. ಯತ್ನಾಳ್ ಬಸ್, ಟಿಪ್ಪರ್ ಕಂಡಕ್ಟರ್ ಆಗಿ ಟಿಕೆಟ್ ಹರೀತಿದ್ರು. ಆದ್ರೀಗ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಅಂತಾರೆ ಆದರೆ, ಯತ್ನಾಳ್ ನಿನಗೆ ವಯಸ್ಸಾಗಿಲ್ವಾ? ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ನಿನಗೆ ಏನಿದೆ ನೈತಿಕತೆ ಎಂದು ಪ್ರಶ್ನಿಸಿದ್ದಾರೆ.