ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಕೇಸ್ : ಮೂವರು ಆರೋಪಿಗಳಿಗೆ ಜೈಲಿನಿಂದ ಬಿಡುಗಡೆ ಭಾಗ್ಯ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಇಂದು ಬೆಳಗ್ಗೆ 11ಕ್ಕೆ ಜೈಲಿನಿಂದ ರಿಲೀಸ್ ಆಗಲಿದ್ದಾರೆ.

ತುಮಕೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಇಂದು ಬಿಡುಗಡೆಯಾಗಲಿದ್ದಾರೆ.  ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನೆಲೆ, ಇಂದು ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಮೂವರು ಆರೋಪಿಗಳು ಬಿಡುಗಡೆಯಾಗಲಿದ್ದಾರೆ. 

ಆರೋಪಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಇಂದು ಬೆಳಗ್ಗೆ 11ಕ್ಕೆ ಜೈಲಿನಿಂದ ರಿಲೀಸ್ ಆಗಲಿದ್ದಾರೆ.  ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ದೊರೆತಿದ್ದು,  ಆರೋಪಿ ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. 

ಜಾಮೀನಿಗೆ ಶ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಟ ನಡೆಸಿದ್ದರು. ಸತತ 9 ದಿನಗಳಿಂದ ಶ್ಯೂರಿಟಿದಾರರಿಗಾಗಿ ಹುಡುಕಾಟ ನಡೆಸಿದ್ದರು. ನಿನ್ನೆ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆ, ಮೂವರು ಆರೋಪಿಗಳಿಗೆ ಜಾಮೀನು ದೊರೆತಿದ್ದು, ಇ-ಮೇಲ್ ಮೂಲಕ ಜಾಮೀನು ಆದೇಶ ಪ್ರತಿ ಜೈಲಾಧಿಕಾರಿಗಾಳ ಕೈ ತಲುಪಿದೆ. 

ಇಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನ ತುಮಕೂರು ಜೈಲಾಧಿಕಾರಿಗಳು ರಿಲೀಸ್ ಮಾಡಲಿದ್ದಾರೆ.