ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಕೇಸ್..ಮೂವರಿಗೆ ಜಾಮೀನು ಮಂಜೂರಾದ್ರೂ ಇನ್ನೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ..!

ಇಂದು ಬಹುತೇಕ ಜಾಮೀನು ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದ್ದು, ಕೋರ್ಟ್ ನಿಂದ ಜೈಲಾಧಿಕಾರಿಗೆ ಜಾಮೀನು ಪ್ರತಿ ತಲುಪುತ್ತದೆ. ಜಾಮೀನು ಪ್ರತಿ ಸಿಕ್ಕ ಬಳಿಕ ಜೈಲಿನಿಂದ ಮೂವರನ್ನ ರಿಲೀಸ್ ಮಾಡಲಾಗುತ್ತದೆ. ​

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನೀಡಿ, ಎರಡು ದಿನವಾದ್ರೂ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಏಕೆಂದು ಜಾಮೀನು ಮಂಜೂರಾದರೂ ಅದರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. 

ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ನಾಲ್ವರು ಆರೋಪಿಗಳ ಪೈಕಿ, ಮೂವರಿಗೆ ಜಾಮೀನು  ಮಂಜೂರಾಗಿತ್ತು.  16ನೇ ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ನಿಂದ, 15ಬೇ ಆರೋಪಿ ಕಾರ್ತಿಕ್ ಹಾಗೂ 17ನೇ ಆರೋಪಿ ನಿಖಿಲ್ ಗೆ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಮಂಜೂರಾಗಿತ್ತು.ಆದರೆ ಬಾಂಡ್ ಶ್ಯೂರಿಟಿ ಸೇರಿದಂತೆ ಇನ್ನಿತರ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿರಲಿಲ್ಲ. ಇಂದು ಬಹುತೇಕ ಜಾಮೀನು ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದ್ದು,  ಕೋರ್ಟ್ ನಿಂದ ಜೈಲಾಧಿಕಾರಿಗೆ ಜಾಮೀನು ಪ್ರತಿ ತಲುಪುತ್ತದೆ. ಜಾಮೀನು ಪ್ರತಿ ಸಿಕ್ಕ ಬಳಿಕ ಜೈಲಿನಿಂದ ಮೂವರನ್ನ ರಿಲೀಸ್ ಮಾಡಲಾಗುತ್ತದೆ.