ಸಿಲಿಕಾನ್ ಸಿಟಿ ಬೆಂಗಳೂರು ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ.. ಆಹಾರ ಅರಸಿ ಬಂದು ವಿಲವಿಲ ಒದ್ದಾಡ್ತಿದ್ದ ಹದ್ದಿನ ರಕ್ಷಣೆ ಕಾರ್ಯಾಚರಣೆ ಎಂಥವರ ಮನಕಲುಕುವಂತಿದೆ.. ಅಷ್ಟಕ್ಕೂ ಆಗಿದ್ದೇನು ಅಂದ್ರೆ.. ಗಾಳಿಪಟದ ದಾರಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹದ್ದು ಒದ್ದಾಡ್ತಿತ್ತು.. ತೆಂಗಿನ ಮರದಲ್ಲಿ ಒಂದೇ ಸಮನೇ ಕೂಗುತ್ತಿದ್ದ ಹದ್ದಿನ ಧ್ವನಿ ಕೇಳಿ ಪಕ್ಷಿಪ್ರಿಯರೂ ಸಂಕಟಪಡ್ತಿದ್ರು.. ಭಾರಿ ಉದ್ದದ ತೆಂಗಿನ ಮರ ಏರಿ.. ಹೇಗಪ್ಪಾ.. ದಾರ ಬಿಡಿಸೋದು ಅಂತಿದ್ದರು.. ಹೀಗಿದ್ದ ವೇಳೆಯೇ ಗಾಳಿಪಟದ ದಾರಕ್ಕೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡ್ತಿದ್ದ ಹದ್ದನ್ನ ಕೆಇಬಿಯವರು ಸರಿಯಾದ ಸಮಯಕ್ಕೆ ಆಗಮಿಸಿ ಅದರ ಜೀವ ಉಳಿಸಿದ್ದಾರೆ..
ಬೆಂಗಳೂರಿನ ಆರ್.ಟಿ.ನಗರದ ಕಡೆ ಆಹಾರ ಹುಡುಕುತ್ತ ಬಂದಿದ್ದ ಹದ್ದಿನ ರೆಕ್ಕೆಯೊಂದಕ್ಕೆ ಗಾಳಿಪಟದ ದಾರ ಸುತ್ತಿಕೊಂಡಿದೆ.. ರೆಕ್ಕೆ ಸಿಕ್ಕಿಕೊಳ್ಳೋಕೆ ಸಾಕಷ್ಟು ಒದ್ದಾಟ ನಡೆಸಿರುವ ಹದ್ದು,, ತೆಂಗಿನ ಮರದಲ್ಲಿ ನೇತಾಡುತ್ತಲೇ ಹರಸಾಹಸವನ್ನೇ ಮಾಡಿದೆ.. ಆದರೆ ಗಾಳಿಪಟಕ್ಕೆ ಕಟ್ಟಿದ್ದ ಪ್ಲಾಸ್ಟಿಕ್ ದಾರ ಬಿಗಿಯಾಗಿದ್ದರಿಂದ ಹದ್ದು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ.. ಈ ವೇಳೆ ಹದ್ದಿನ ಕೂಗಿ ಕೇಳಿದ್ದ ಸ್ಥಳೀಯರು ಮತ್ತು ಪಕ್ಷಿಪ್ರಿಯರು ಹೇಗಾದ್ರೂ ಮಾಡಿ ಅದರ ಜೀವ ಉಳಿಸಬೇಕು ಅಂತಾ ಒದ್ದಾಡಿದ್ದಾರೆ.. ಇದೇ ವೇಳೆ ಸರಿಯಾದ ಸಮಯಕ್ಕೆ ಬಂದ ಬೆಸ್ಕಾಂ ಸಿಬ್ಬಂದಿ,, ಹದ್ದಿನ ರೆಕ್ಕೆಗಳಿಗೆ ಹಾನಿಯಾಗದಂತೆ ದಾರವನ್ನು ಕತ್ತರಿಸಿದ್ದಾರೆ.. ಯಾವಾಗ ದಾರದಿಂದ ಮುಕ್ತಿ ಸಿಗ್ತೋ ಅಂತು-ಇಂತು ಬದುಕಿದೆ ಅಬ್ಬಾ.. ಅಂತ ಹದ್ದು ನಿಟ್ಟಿಸಿರು ಬಿಟ್ಟಿದೆ.. ತೆಂಗಿನ ಮರದ ದಾರಕ್ಕೆ ಸಿಲುಕಿದ್ದ ಹದ್ದನ್ನ ಸುರಕ್ಷಿತವಾಗಿ ಕೆಳಗೆ ಇಳಿಸಿ ದಾರ ತೆಗೆಯಲಾಗಿದೆ.. ಕೆಳಗೆ ಬಂದ ಹದ್ದು, ರೆಕ್ಕೆ ಬಡಿಯುತ್ತಲೇ ಆಕಾಶದತ್ತ ಹಾರಿದೆ.. ಹದ್ದು ಹಾರಿದ್ದನ್ನ ಕಂಡು ಪಕ್ಷಿಪ್ರಿಯರೂ ಖುಷಿಯಾಗಿದ್ದಾರೆ, ಬೆಸ್ಕಾಂ ಸಿಬ್ಬಂದಿಗೂ ಥ್ಯಾಂಕ್ಸ್ ಹೇಳಿದ್ದಾರೆ.. ನಿಮ್ ಕೆಲಸಕ್ಕೆ ಸಲಾಂ ಅಂತಾ ಧನ್ಯವಾದ ಹೇಳಿದ್ದಾರೆ..