ಮಂಡ್ಯ : ಲೋಕಪಾವನಿ ನದಿ ನೀರಿನ ರಭಸಕ್ಕೆ ರೈತ ಮತ್ತು ಎತ್ತು ಗಾಡಿ ಕೊಚ್ಚಿ ಹೋದ ಘಟನೆಯೊಂದು ನಡೆದಿದ್ದು, ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ರೈತ ಸೇರಿ ಎತ್ತು ಗಾಡಿ ರಕ್ಷಣೆ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿ ಬಳಿಯ ಲೋಕಪಾವನಿ ನದಿಯಲ್ಲಿ ಈ ಘಟನೆ ನಡೆದಿದೆ.

ಎತ್ತು ಮತ್ತು ಗಾಡಿಯು ಶ್ರೀನಿವಾಸ ಅಗ್ರಹಾರ ರಾಜು ಎಂಬುವರಿಗೆ ಸೇರಿದ್ದು, ಲೋಕಪಾವನಿ ನದಿಯಲ್ಲಿ ಎತ್ತು ಗಾಡಿ ನಿಲ್ಲಿಸಿ ತೊಳೆಯುವ ವೇಳೆ ಈ ಘಟನೆ ಸಂಭವಿಸಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನದಿ ನೀರು ರಭಸವಾಗಿ ಹರಿಯತ್ತಿದೆ. ನೀರಿನ ರಭಸಕ್ಕೆ ಎತ್ತು ಗಾಡಿ ಮತ್ತು ರೈತ ಸೇರಿ 200 ಮೀ ವರೆಗೂ ಕೊಚ್ಚಿ ಹೋಗಿದೆ. ಗಾಡಿ ಸಮೇತ ಕೊಚ್ಚಿ ಬಂದ ರೈತ ಮತ್ತು ಎತ್ತುಗಳನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೊಚ್ಚಿ ಬಂದು ಸೇತುವೆ ಬಳಿ ಸಿಲುಕಿದ್ದ ಗಾಡಿ ಕ್ರೇನ್ ಮೂಲಕ ಹೊರಕ್ಕೆ ತೆಗೆಯಲಾಗಿದೆ. ಯಾರು ನದಿ ಬಳಿಗೆ ಹೋಗದಂತೆ ರೈತರಿಗೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.