ಸ್ಪೆಷಲ್ ಸ್ಟೋರಿ

ನಿವೃತ್ತ ಸುಪ್ರೀಂಕೋರ್ಟ್​ ಜಡ್ಜ್​ - ಬದುಕಿಗಾಗಿ ಮತ್ತೆ ಕೆಲಸಕ್ಕೆ ಹಾಜರ್​

ಇದಪ್ಪ ಬದುಕಂದ್ರೇ

ಬೆಂಗಳೂರು - ಇವರು ದೇಶದ ಅತ್ಯುನ್ನತ ಕೋರ್ಟ್ ಸುಪ್ರೀಂ ಕೋರ್ಟ್ ಜಡ್ಜ್ ಆಗಿದ್ದರು . ಲೋಕಾಯುಕ್ತ ಆಗಿ 5 ವರ್ಷ ಭ್ರಷ್ಟರನ್ನ ಜೈಲಿಗೂ ಕಳುಹಿಸಿದ್ರು. ವಯೋ ಸಹಜ ಕಾರಣಕ್ಕೆ ನಿವೃತ್ತರಾಗಿದ್ದಾರೆ . ಈಗ ಬದುಕನ್ನ ನಡೆಸಲು ಆರ್ಥಿಕವಾಗಿ ಸ್ವಾವಲಂಬಿಯಾಗಲು ದುಡಿಯಲು ಮುಂದಾಗಿದ್ದಾರೆ. 

ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ  ಸ್ಥಾನ ಕಳೆದುಕೊಂಡ ನಂತರ ಖಾಸಗೀ ಕಂಪನಿಯ ಉದ್ಯೋಗಿ ಆಗಿ ಸರಳತೆ ಮೇರೆದಿದ್ದರು. ಈ ಸುದ್ದಿ ವಿಶ್ವದ ಎಲ್ಲೆಡೆ ದೊಡ್ಡ ಸದ್ದು ಮಾಡಿತು. ಈಗ ಇಂತಹದೇ ಸುದ್ದಿ ನಮ್ಮ ನಿಮ್ಮ ಮಧ್ಯೆನೆ ಇದೆ. ಆದರೆ , ನಮಗೆ ಮಾಹಿತಿ ಇಲ್ಲ ಅಷ್ಟೇ. 

ಹೌದು , ಸಂತೋಷ್ ಹೆಗ್ಡೆ , ಲೋಕಾಯುಕ್ತ ಸಂತೋಷ್ ಹೆಗ್ಡೆ . ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದರು. ಭ್ರಷ್ಟತೆಯ ವಿರುದ್ಧ ಹೋರಾಟ ಮಾಡಿ ದೊಡ್ಡ ಸಂಚಲಯ ಸೃಷ್ಟಿಸಿದರು. ಇವರು ಈಗ ತಮ್ಮ ನಿವೃತ್ತ ಬದುಕನ್ನು ಮಾದರಿಯಾಗಿಸಿದ್ದಾರೆ.

ತಮ್ಮ ನಿವೃತ್ತಿ ನಂತರ ಮನೆಯಿಂದ ಆನ್ಲೈನ್ ಮೂಲಕ ಕೋರ್ಟ್ ನ ಆರ್ಬಿಟ್ರೇಶನ್ ಅಂದರೆ ಮಧ್ಯಸ್ಥಿಕೆ ವಹಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದು ತಾವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು . ಜೊತೆಗೆ ಅವರಿಗೆ ಸದ್ಯ ತಮ್ಮ ಅನುಭವ ಇರುವ ಕ್ಷೇತ್ರದಲ್ಲೇ ತಮ್ಮ ಮುಂದಿನ ಸಾಧನೆ ಮಾಡಲು ಅವಕಾಶವೂ ಸಿಕ್ಕಿದೆ. ಹೀಗಾಗಿ ನಿತ್ಯ ನೂರಾರು ಕಡತಗಳನ್ನ ತಮ್ಮ ನಿವಾಸದಲ್ಲೇ ಇರುವ ಕಚೇರಿಯಲ್ಲಿ ಇರಿಸಿಕೊಂಡು ಮಧ್ಯಸ್ಥಿಕೆ ನಡೆಸಲು ಮುಂದಾಗಿದ್ದಾರೆ. 

ಈ ಮೂಲಕ ತಮ್ಮ 85 ವರ್ಷದ ವಯಸ್ಸಿನಲ್ಲೂ ದುಡಿದು ಬದುಕು ಎಂಬ ತತ್ವವನ್ನ ತಪ್ಪದೇ ಪಾಲಿಸುತ್ತಿದ್ದಾರೆ. ಭ್ರಷ್ಟರ ವಿರುದ್ಧ ಹೋರಾಟ ಬರೀ ವೃತ್ತಿ ಬದುಕಿನಲ್ಲಿ ಅಲ್ಲ , ಬದಲಾಗಿ ನಿವೃತ್ತಿ ನಂತರವೂ ಪಾಲಿಸುವ ಮೂಲಕ ವಿಶ್ವದಲ್ಲಿ ಕರ್ನಾಟಕದ ಸಂತೋಷ್ ಹೆಗ್ಡೆಯವರು ಮಾದರಿಯಾಗಿದ್ದಾರೆ.