ಸ್ಕೂಟಿ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಓರ್ವ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ಬನಹಟ್ಟಿ ಹೊರ ವಲಯದ ಹೊಸೂರು ಬೈಪಾಸ್ ರಸ್ತೆಯಲ್ಲಿ ಘಟನೆ ಸಂಬವಿಸಿದೆ. ಬೈಕ್ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಲ್ಲಿಕಾರ್ಜುನ ಎಂಬ(22) ವರ್ಷದ ಮೃತ ದುರ್ದೈವಿಯಾಗಿದ್ದಾನೆ.
ಈ ಘಟನೆಯಲ್ಲಿ ತಲೆ, ಮುಖ ಭಾಗಕ್ಕೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಘಟನೆಯಲ್ಲಿ ರಮೇಶ್, ಕಲ್ಮೇಶ್, ಶ್ರೀಶೈಲ್ ಮೂವರಿಗೂ ಗಂಭೀರ ಗಾಯಗೊಂಡವರಾಗಿದ್ದಾರೆ. ಮೃತ ಮಲ್ಲಿಕಾರ್ಜುನ್ ಕುಳಲಿ ಗ್ರಾಮದ ನಿವಾಸಿ ಆಗಿದ್ದು, ಮಲ್ಲಿಕಾರ್ಜುನ್ ಕುಳಲಿಯಿಂದ ಬನಹಟ್ಟಿಗೆ ಇಬ್ಬರು ಸ್ನೇಹಿತರೊಂದಿಗೆ ತೆರಳುತ್ತಿದ್ದರು.
ಸದ್ಯ, ಘಟನೆ ಸಂಬಂಧ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.