ಕ್ರೀಡೆಗಳು

ರಿಷಬ್‌ ಪಂತ್‌ಗೆ ಒಲಿದ ಲಕ್ನೋ ತಂಡದ ನಾಯಕತ್ವ..!

ಐಪಿಎಲ್‌ ಹರಾಜಿನಲ್ಲಿ ದಾಖಲೆ ಮೊತ್ತ ಪಡೆದಿರುವ ರಿಷಬ್‌ ಪಂತ್‌ಗೆ ಇದೀಗ ಲಕ್ನೋ ತಂಡದ ನಾಯಕತ್ವ ಒಲಿದಿದೆ.

ಐಪಿಎಲ್‌ ಹರಾಜಿನಲ್ಲಿ ದಾಖಲೆ ಮೊತ್ತ ಪಡೆದಿರುವ ರಿಷಬ್‌ ಪಂತ್‌ಗೆ ಇದೀಗ ಲಕ್ನೋ ತಂಡದ ನಾಯಕತ್ವ ಒಲಿದಿದೆ.. ದುಬಾರಿ ಆಟಗಾರನಿಗೆ ನಿರೀಕ್ಷೆಯಂತೆಯೇ ನಾಯಕತ್ವ ಪಟ್ಟ ಸಿಕ್ಕಿದೆ.. ಲಕ್ನೋ ಸೂಪರ್ ಜೈಂಟ್ಸ್ ಅಧಿಕೃತವಾಗಿ ರಿಷಬ್ ಪಂತ್‌ರನ್ನು ನಾಯಕ ಎಂದು ಘೋಷಣೆ ಮಾಡಿದೆ.. ತಂಡದ ಮಾಲೀಕ ಸಂಜೀವ್ ಗೊಯೆಂಕಾ,, ರಿಷಬ್‌ ಪಂತ್‌ಗೆ ಜೆರ್ಸಿ ನೀಡುವ ಮೂಲಕ ನಾಯಕ ಎಂದು ಘೋಷಿಸಿದ್ದಾರೆ.. 
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಲಕ್ನೋ ಫ್ರಾಂಚೈಸಿ 27 ಕೋಟಿ ರೂಪಾಯಿಗೆ ಖರೀದಿಸಿತ್ತು.. ರಿಷಬ್ ಪಂತ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.. ಐಪಿಎಲ್ 2021, 2022 ಮತ್ತು 2024 ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.. ಆದ್ರೆ ಐಪಿಎಲ್‌ನಲ್ಲಿ ಹರಾಜಿಗೆ ಬಂದ ಹಿನ್ನೆಲೆ ಬರೋಬ್ಬರಿ 27 ಕೋಟಿ ಕೊಟ್ಟು ರಿಷಬ್‌ ಪಂತ್‌ ಅವರನ್ನ ಲಕ್ನೋ ತಂಡ ಖರೀದಿಸಿತ್ತು.. ಇದಕ್ಕೂ ಮುಂದೆ ಲಕ್ನೋ ಟೀಂನ ಕನ್ನಡಿಗ ಕೆ.ಎಲ್‌. ರಾಹುಲ್‌ ಮುನ್ನಡೆಸಿದ್ದರು.. ಆದರೆ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಜೊತೆಗಿನ ಭಿನ್ನಾಪ್ರಾಯದಿಂದ ತಂಡದಿಂದ ಹೊರಬಂದಿದ್ದರು.. ಹೀಗಾಗಿ ತಂಡದ ನಾಯಕ ಸ್ಥಾನ ಖಾಲಿಯಾಗಿತ್ತು.. ಇದೀಗ ಈ ಜಾಗಕ್ಕೆ ರಿಷಬ್‌ ಪಂತ್‌ ಬಂದಿದ್ದಾರೆ..