ವೈರಲ್

ಬಂಡೆ ಸ್ಫೋಟಕ : ವಿದ್ಯಾರ್ಥಿಗೆ ಗಂಭೀರ ಗಾಯ

ವಿದ್ಯಾರ್ಥಿಯ ಮೂರು ಬೆರಳು ಛಿದ್ರವಾಗಿವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ. ಮೋನಿಷ್ ಗಾಯಗೊಂಡ ಎಸ್ಎಸ್ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ.

ತುಮಕೂರು : ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ವಿದ್ಯಾರ್ಥಿಗೆ ಗಂಭೀರವಾಗಿ ಗಾಯಗೊಂಡಿದ್ದು, ವಿದ್ಯಾರ್ಥಿಯ ಮೂರು ಬೆರಳು ಛಿದ್ರವಾಗಿವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ. ಮೋನಿಷ್ ಗಾಯಗೊಂಡ ಎಸ್ಎಸ್ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ.

ಘಟನೆಯಲ್ಲಿ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಪೋಟಕವು ಶಾಲೆಯಿಂದ ಕೂಗಳತೆ ದೂರದಲ್ಲಿದ್ದ ಬಂಡೆಯ ಬಳಿಯಿತ್ತು. ವಿದ್ಯಾರ್ಥಿ ಆಟದ ವಸ್ತು ಇರಬಹುದು ಎಂದು ತಿಳಿದು ಕೆಂಪು ಬಣ್ಣದ ಸ್ಫೋಟಕ ವಸ್ತುವನ್ನ ಮುಟ್ಟಿದ್ದಾನೆ.  ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಘಟನೆ ಸಂಬಂಧ ಸ್ಥಳಕ್ಕೆ ಸಿ.ಎಸ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.