ಕರ್ನಾಟಕ

ಚಾಮುಂಡಿ ಬೆಟ್ಟದಲ್ಲಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು

ಮಿಳುನಾಡಿನ ಪುದುಚೇರಿ, ವಿಲ್ಲಾಪುರಂ, ಹಾಗೂ ಕರಾವಳಿ ಭಾಗದಲ್ಲಿ ಫೆಂಗಲ್‌ ಅಬ್ಬರ ಜೋರಾಗಿದ್ದು, ಭಾರಿ ಮಳೆಗೆ ಪ್ರವಾಹ ಉಂಟಾಗಿದೆ. ಅಕ್ಕ ಪಕ್ಕದ ರಾಜ್ಯಗಳಿಗೂ ಇದರ ಎಫೆಕ್ಟ್‌ ತಾಗಿದೆ. ರಾಜ್ಯದಲ್ಲೂ ಕೆಲವು ಪ್ರದೇಶದಲ್ಲಿ ಭಾರಿ ಮಳೆಯಾಗ್ತಿದೆ.

ಮೈಸೂರು : ಫೆಂಗಲ್ ಚಂಡಮಾರುತದ ಏಫೆಕ್ಟ್‌ಗೆ ಅಕ್ಷರಶಃ ದಕ್ಷಿಣ ಭಾರತ ತತ್ತರಿಸಿದೆ. ತಮಿಳುನಾಡಿನ ಪುದುಚೇರಿ, ವಿಲ್ಲಾಪುರಂ, ಹಾಗೂ ಕರಾವಳಿ ಭಾಗದಲ್ಲಿ ಫೆಂಗಲ್‌ ಅಬ್ಬರ ಜೋರಾಗಿದ್ದು, ಭಾರಿ ಮಳೆಗೆ ಪ್ರವಾಹ ಉಂಟಾಗಿದೆ. ಅಕ್ಕ ಪಕ್ಕದ ರಾಜ್ಯಗಳಿಗೂ ಇದರ ಎಫೆಕ್ಟ್‌ ತಾಗಿದೆ. ರಾಜ್ಯದಲ್ಲೂ ಕೆಲವು ಪ್ರದೇಶದಲ್ಲಿ ಭಾರಿ ಮಳೆಯಾಗ್ತಿದೆ.

ಮೈಸೂರು ಜಿಲ್ಲೆಯಲ್ಲಿ ನಿರಂತರ ಮಳೆಯಾಗ್ತಿದೆ. ಇದರ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಮಣ್ಣು ಸಡಿಲಗೊಂಡು ಕಲ್ಲು ಬಂಡೆಗಳು ರಸ್ತೆಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಆದ್ರೆ ರಸ್ತೆಗುರುಳಿದ ಬಂಡೆಗಳಿಂದ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆ ಉಂಟಾಯಿತು. 

ಇನ್ನು ನಗರದ ಸರಸ್ವತಿಪುರಂನಲ್ಲಿ ಮನೆಯ ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರಗಳು ಧರಶಾಹಿಯಾಗಿದ್ದು, ಎರಡು‌ ಕಾರು ಜಖಂಗೊಂಡಿವೆ. ಮರ ಕಾರಿನ ಮೇಲೆ ಉರುಳಿ ಬಿದ್ದ ದೃಶ್ಯ ಸಿ‌‌ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.