ಆಸ್ಟ್ರೇಲಿಯಾ ಪ್ರವಾಸವೇ ದಿಗ್ಗಜ ಆಟಗಾರರಿಗೆ ಕೊನೆಯಾಗುತ್ತಾ ಎನ್ನುವ ಅನುಮಾನ ಶುರವಾಗಿದೆ. ಸರಣಿ ಆರಂಭದಲ್ಲಿಯೇ ಖ್ಯಾತ ಸ್ಪಿನರ್ ಅಶ್ವಿನ್ ವಿದಾಯ ಹೇಳಿರೋ ನೋವು ಇನ್ನೂ ಮಾಯವಾಗಿಲ್ಲ. ಈ ಮಧ್ಯೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್, ದಿಗ್ಗಜರ ಕ್ರಿಕೆಟ್ ಭವಿಷ್ಯವನ್ನೇ ಕೊನೆಕೊಳಿಸುತ್ತಾ ಎನ್ನುವ ಚರ್ಚೆ ಜೋರಾಗಿದೆ.
ದೊಡ್ಡ ಇನ್ನಿಂಗ್ಸ್ ಅಡುವುದರಲ್ಲಿ ರೋಹಿತ್ ಶರ್ಮಾ ಎತ್ತಿದ ಕೈ. ಸ್ಪೋಟಕವಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ರೋಹಿತ್ ಶರ್ಮಾ ಅದೇ ಕಾರಣಕ್ಕೆ ಕ್ರಿಕೆಟ್ ಲೋಕದಲ್ಲಿ ಹಿಟ್‌ಮ್ಯಾನ್ ಎಂದೇ ಖ್ಯಾತಿ. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಒಂದಲ್ಲ. ಎರಡಲ್ಲೂ 3 ದ್ವಿಶತಕವನ್ನು ದಾಖಲಿಸಿದ್ದಾರೆ. ಐತಿಹಾಸಿಕ ಸಾಧನೆಯ ಮಾಡಿರುವ ಇಂಥಾ ಸ್ಫೋಟಕ ಬ್ಯಾಟರ್ ಇದೀಗ ಒಂದಂಕಿ ರನ್ ಗಳಿಸಲು ಪರದಾಡ್ತಿದ್ದಾರೆ.
2007ರಲ್ಲಿ ರೋಹಿತ್ ಶರ್ಮಾ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಭಾರತ ತಂಡದ ಪರ ಟೆಸ್ಟ್ ಆಡೋಕೆ ಪಿಚ್‌ಗೆ ಎಂಟ್ರಿ ಕೊಟ್ಟಿದ್ರು.. ಇಂಥಾ ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕವೇ ಹಿಟ್‌ಮ್ಯಾನ್ ಅಂತಾ ಹೆಸರು ಗಳಿಸಿದ್ದಾರೆ. ಒನ್‌ಮ್ಯಾನ್ ಶೋ ಎನ್ನುವಂತೆ ಭಾರತವನ್ನ ಗೆಲುವಿನ ಗುರಿ ಮುಟ್ಟಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಅಂದ್ರೆ 265, ಒನ್ ಡೇಯಲ್ಲಿ ಅತಿಹೆಚ್ಚು ದ್ವಿಶತಕ ಅಂದ್ರೆ ಮೂರು, ಅಂತಾರಾಷ್ಟ್ರೀಯ ಟಿ20 ಗರಿಷ್ಠ ರನ್ ರನ್ ಮಾತ್ರವಲ್ಲ ಅತಿಹೆಚ್ಚು ಶತಕ ಜೊತೆ ಹೈಹೆಸ್ಟ್ ಸಿಕ್ಸರ್ ಸಾಧನೆ ಇರೋದು ರೋಹಿತ್ ಹೆಸರಲ್ಲೇ. ಅಷ್ಟೇ ಅಲ್ಲ ಐಪಿಎಲ್‌ನಲ್ಲಿಯೂ ರೋಹಿತ್ ಕಮಾಲ್ ಮಾಡಿದ್ದಾರೆ. ಅದರಲ್ಲಿಯೂ ಮುಂಬೈ ಪರವಾಗಿ ಹೆಚ್ಚು ಐಪಿಲ್ ಟ್ರೋಪಿ ಗೆಲ್ಲಿಸಿದ ಕೀರ್ತಿ ರೋಹಿತ್ ಹೆಸರಲ್ಲಿದೆ. ಇಂಥಾ ಹಿಟ್‌ಮ್ಯಾನ್ ಇದೀಗ ರನ್ ಗಳಿಸೋಕೆ ಆಗ್ತಿಲ್ಲ.. ಟೀಕಾಕಾರರಿಗೆ ಆಹಾರವಾಗಿದ್ದಾರೆ. ನಿವೃತ್ತಿ ತೆಗೆದುಕೊಳ್ಳಿ ಎನ್ನುವ ಸಲಹೆಗಳನ್ನ ನೀಡಲಾಗ್ತಿದೆ. ಹೊಸಬರಿಗೆ ಅವಕಾಶ ಮಾಡಿಕೊಂಡಿ ಎನ್ನುವ ಕೂಗು ಎದ್ದಿದೆ.
2024ರಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.. ಕಳೆದ ವರ್ಷ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 26.39ರ ಸರಾಸರಿಯಲ್ಲಿ 607 ರನ್ ಸಿಡಿಸಿದ್ದಾರೆ.. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ, ರೋಹಿತ್ ಶರ್ಮಾ ಅವರಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ ಎಂದು ಹೇಳಲಾಗುತ್ತಿದೆ. ಇನ್ನು ಬಾರ್ಡರ್-ಗವಾಸ್ಕರ್ ಸರಣಿಗೆ ಅಂತಾ ಆಸ್ಟ್ರೇಲಿಯಾಗೆ ಬಂದಿದ್ದ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ.. ಐದು ಪಂದ್ಯಗಳ ಕೊನೆಯ ಟೆಸ್ಟ್ ಸರಣಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾನೇ ಪಂದ್ಯದಿಂದ ದೂರ ಇಡಲಾಗಿದೆ. ಇದೆಲ್ಲಾ ನೋಡಿದ್ರೆ ಹಿಟ್‌ಮ್ಯಾನ್ ಆಟ ಅಂತ್ಯವಾಯ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ.