ಕರ್ನಾಟಕ

ಉದ್ಯಮಿ ಕುಟುಂಬಕ್ಕೆ ಮತ್ತೆ ರೌಡಿಗಳಿಂದ ಧಮ್ಕಿ..?

ವಿದ್ಯಾರಣ್ಯಪುರದ ಉದ್ಯಮಿ ಶಶಾಂಕ್‌ ಎಂಬುವರ ಕುಟುಂಬಕ್ಕೆ ರೌಡಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ವಿದ್ಯಾರಣ್ಯಪುರದ ಉದ್ಯಮಿ ಶಶಾಂಕ್‌ ಎಂಬುವರ ಕುಟುಂಬಕ್ಕೆ ರೌಡಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರಣ್ಯಪುರದಲ್ಲಿರುವ ಸೈಟಿನ ಕಾಂಪೌಂಡ್‌ ಹೊಡೆಯಲು ಯತ್ನ ನಡೆದಿದ್ದು, ಇದನ್ನು ಪ್ರಶ್ನಿಸಿದ್ದ ಉದ್ಯಮಿ ತಾಯಿ ಹಾಗೂ ಕುಟುಂಬಸ್ಥರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಇದೇ ವಿಚಾರಕ್ಕೆ ಅರೆಸ್ಟ್‌ ಆಗಿದ್ದ ಆರೋಪಿಗಳು, ಇದೀಗ ಮತ್ತೆ ಅದೇ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.  

ಈ ಹಿಂದೆ 2022ರಲ್ಲಿ ಆರೋಪಿಗಳ ವಿರುದ್ದ ವಿದ್ಯಾರಣ್ಯಪುರ ಠಾಣೆಯಲ್ಲಿ, ಶಶಾಂಕ್‌ ಅತಿಕ್ರಮ ಪ್ರವೇಶ ದೂರು ನೀಡಿದ್ದರು. ಬಿಡ್ಡ ಶೇಖರ್, ಮೋಹನ್, ಜೋಸೆಫ್ ಎಂಬುವವರ ವಿರುದ್ದ ದೂರು ದಾಖಲಾಗಿತ್ತು. ಕಳೆದ ವಾರವೂ ಉದ್ಯಮಿಯ ಸೈಟಿನ ಬಳಿ ಬಂದು ಕಂಪೌಂಡ್ ಗೋಡೆ ತೆರವುಗೊಳಿಸಲು ಯತ್ನ ನಡೆದಿದ್ದು, ಈ ಬಗ್ಗೆಯೂ ದೂರು ದಾಖಲಾಗಿದೆ.