ಬೆಂಗಳೂರಿನ ತಲಘಟ್ಟಪುರ ಪೊಲೀಸರಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್ ಬಂಧನವಾಗಿದೆ. ಬರ್ತ್‌ಡೇ ಸಂಭ್ರಮದಲ್ಲಿದ್ದ ಬಿಹಾರ ಮೂಲದ ಕಾರ್ಮಿಕರ ಮೇಲೆ ಮೇಲೆ, ಮೋಹನ್ ಬಾಬು ಎಂಬ ರೌಡಿಶೀಟರ್ ಹಲ್ಲೆ ಮಾಡಿದ್ದ. ಅವಾಜ್ ಹಾಕ್ತಿದ್ದೀರಾ ಎಂದು ಮಾರಕಾಸ್ತ್ರ ಸಮೇತ ಬಂದಿದ್ದ ರೌಡಿಶೀಟರ್ ಮೋಹನ್ ಬಾಬು, ಮೂರ್ನಾಲ್ಕು ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ. ಗಾಯಗೊಂಡ ಕಾರ್ಮಿಕರು ಆಸ್ಪತ್ರೆಗೆ ಸೇರಿದ್ದು ಈ ಬಗ್ಗೆ, ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೌಡಿಶೀಟರ್‌ನ ಬಂಧಿಸಿ ಜೈಲಿಗೆ ಕಳಿಸಿದ್ರು. ಈ ಹಿಂದೆ ಕೊಲೆ ಕೇಸ್‌ವೊಂದರಲ್ಲಿ ಜೈಲಿಗೆ ಹೋಗಿದ್ದ ರೌಡಿಶೀಟರ್, ಒಂದಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಇದೀಗ ಮತ್ತೆ ಜೈಲಿಗೆ ಹೋಗಿದ್ದಾನೆ.