ತುಮಕೂರು ಜಿಲ್ಲೆ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ, ಪಾರ್ಕಿಂಗ್ ಟೆಂಡರ್ ಪಡೆದ ಗುತ್ತಿಗೆದಾರನ ಟೀಂ ವಿರುದ್ಧ ಗೂಂಡಾಗಿರಿ ಆರೋಪ ಕೇಳಿ ಬಂದಿದೆ. ಅಪ್ರಾಪ್ತ ಬಾಲಕನೊಬ್ಬನನ್ನು ಕೆಲಸಕ್ಕಿಟ್ಟುಕೊಂಡಿದ್ದಲ್ಲದೇ, ದೇವಾಲಯಕ್ಕೆ ಬರುವ ಭಕ್ತರೊಂದಿಗೆ ಕಿರಿಕ್ ಮಾಡುತ್ತಾರೆ ಎಂದು ಕೇಳಿ ಬಂದಿದೆ. ಅಂದರೆ ದೇವಾಲಯದ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಹಣ ವಸೂಲಿ ಮಾಡುತ್ತಿದ್ದು, ಹಣ ನೀಡಲು ಹಿಂದೇಟು ಹಾಕಿದವರ ಮೇಲೆ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿಯಮಗಳನ್ನು ಗಾಳಿಗೆ ತೂರಿ, ನಾವ್ ಮಾಡಿದ್ದೇ ರೂಲ್ಸ್, ನಾವೇಳ್ದಂಗೆ ಕೇಳ್ಬೇಕು. ನಾವ್ ಯಾವನಿಗೂ ಹೆದರಲ್ಲ, ಪೊಲೀಸರಿಗೂ ನಾವು ಕೇರ್ ಮಾಡಲ್ಲ ಎಂದು ಗುತ್ತಿಗೆದಾರನ ಪರವಾಗಿರುವ ಒಂದಷ್ಟು ಪುಡಾರಿಗಳು ವರ್ತಿಸುತ್ತಾರಂತೆ.
ತುಮಕೂರೂ ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿರುವ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಮುಜರಾಯಿ ಇಲಾಖೆಯಲ್ಲಿ ಎ ಗ್ರೇಡ್ ಹೊಂದಿರುವ ಈ ದೇವಸ್ಥಾನಕ್ಕೆ, ಪ್ರತಿನಿತ್ಯ ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ. ಪ್ರತಿನಿತ್ಯ ಸಾವಿರಾರು ರೂಪಾಯಿ ಪಾರ್ಕಿಂಗ್ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ.