ಕರ್ನಾಟಕ

BJPಯಿಂದ 100 ಕೋಟಿ ಆಫರ್ : ತಾಕತ್ತಿದ್ರೇ ಆಫರ್ ಬಗ್ಗೆ ತನಿಖೆ ಮಾಡಿಸಿ..! ಶಾಸಕ ಗಣಿಗ ರವಿಗೆ ರೇಣುಕಾಚಾರ್ಯ ಸವಾಲ್..

ನಿಮಗೆ ತಾಕತ್ತಿದ್ದರೆ 100 ಕೋಟಿ ರೂಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಶಾಸಕ ಗಣಿಗ ರವಿ ಅವರಿಗೆ ಮಾಜಿ ಸಚಿವ ಎಂ.ಪಿ ರೇಣುಕಾಸ್ವಾಮಿ ಸವಾಲು ಹಾಕಿದ್ದಾರೆ.

ದಾವಣಗೆರೆ :  ಕರ್ನಾಟಕ ಸರ್ಕಾರವನ್ನು ಬೀಳಿಸಲು ರಾಜ್ಯದ ಮೂವರು ಸಂಸದರು ಪ್ರಧಾನಿ ಮೋದಿಗೆ ಮಾತು ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ರವಿ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಮಾಡಿದ್ದಾರೆ ಎಂಬ ಗಣಿಗ ರವಿ ಆರೋಪಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. 

.ಈ ಬಗ್ಗೆ ಹೊನ್ನಾಳಿಯ ಮಾತನಾಡಿದ  ಮಾಜಿ ಸಚಿವ ಎಂ.ಪಿ.ರೇಣುಕಾರ್ಯಚಾರ್ಯ, ನಿಮಗೆ ತಾಕತ್ತಿದ್ದರೆ 100 ಕೋಟಿ ರೂಗಳ ಆಫರ್ ಬಗ್ಗೆ ತನಿಖೆ ಮಾಡಿಸಿ ಶಾಸಕ ಗಣಿಗ ರವಿ ಅವರಿಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು, ನಾಡಿನ ಜನರ ಗಮನ ಬೇರೆಡೆಗೆ ಸೆಳೆಯಲು 100 ಕೋಟಿ ರು.ಗಳ ಆಫರ್ ಬಗ್ಗೆ ಮಾತನಾಡುತ್ತಿದ್ದಾರಷ್ಟೇ. ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದಾರೆಂದು ಹೇಳುವ ನೀವು, ಗಾಳಿಯಲ್ಲಿ ಗುಂಡು ಹೊಡೆಯಬೇಡಿ. ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು, ನಿಷ್ಪಕ್ಷಪಾತವಾಗಿ ತನಿಖೆಗೆ ಕ್ರಮ ಕೈಗೊಳ್ಳಿ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆಯ ನಂತರ ರವಿ ಗಣಿಗ ಅವರಿಗೆ ಸೂಚನೆ ಬಂದಿದೆ. ಹಾಗಾಗಿ ಬಿಜೆಪಿ ಮೇಲೆ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. 

ಒಂದೂವರೆ ವರ್ಷದ ಹಿಂದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.  ಆಗಿನಿಂದಲೂ ಕಾಂಗ್ರೆಸ್ ನೇತಗೃತ್ವದ ಸಕಾ್ರ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಎಸಗುತ್ತಿದೆ. ಜನಾದೇಶವು ಕಾಂಗ್ರೆಸ್ ಪರವಿದ್ದು, ಉತ್ತಮವಾಗಿ 5 ವರ್ಷ ಆಳಲಿ ಅಂತಾ ಜನತೆ ಸಹ ಆಶೀರ್ವದಿಸಿದ್ದಾರೆ. ಆದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ನೇತೃತ್ವದ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂದು ರೇಣುಕಾಚಾರ್ಯ ಅವರು ಆರೋಪಿಸಿದರು.