ಕರ್ನಾಟಕ

40 ಲಕ್ಷ ರೂ. ಚೆಕ್‌ ಬೌನ್ಸ್‌ ಆರೋಪ : ಜೈಲು ಪಾಲಾಗ್ತಾರಾ ಪದ್ಮಜಾ ರಾವ್..?

ಕಳೆದ 4 ವರ್ಷಗಳಿಂದ ನಟಿ ಪದ್ಮಜಾ ರಾವ್ ಚೆಕ್‌ ಬೌನ್ಸ್ ವಿಚಾರ ಪ್ರಕರಣ ನಡೆಯುತ್ತಿದ್ದು, ಈ ಸಂಬಂಧ ಮಂಗಳೂರು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಹಣ ನೀಡಬೇಕು ಅಥವಾ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್​ ಶಿಕ್ಷೆ ವಿಧಿಸಿದೆ.

ಮಂಗಳೂರು : ಹಿರಿಯ ನಟಿ ಪದ್ಮಜಾ ರಾವ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಗಟ್ಟಿಗಿತ್ತಿ ಅತ್ತೆ ಪಾತ್ರ ನಿರ್ವಹಿಸುತ್ತಾ, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡ್ತಿದ್ದ ಪದ್ಮಜಾ ರಾವ್ ಈಗ ಜೈಲು ಪಾಲಾಗುವ ಸಂದರ್ಭ ಒಂದೊದಗಿದೆ.

ಕಳೆದ 4 ವರ್ಷಗಳಿಂದ ನಟಿ ಪದ್ಮಜಾ ರಾವ್ ಚೆಕ್‌ ಬೌನ್ಸ್ ವಿಚಾರ ಪ್ರಕರಣ ನಡೆಯುತ್ತಿದ್ದು, ಈ ಸಂಬಂಧ ಮಂಗಳೂರು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಹಣ ನೀಡಬೇಕು ಅಥವಾ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಶಿಕ್ಷೆ ವಿಧಿಸಿದೆ. 

ನಾಲ್ಕು ವರ್ಷಗಳ ಹಿಂದಿನ ವಿಚಾರ ಇದೀಗ ಮತ್ತೆ ಸುದ್ದಿಯಾಗ್ತಿದ್ದು, ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. 40 ಲಕ್ಷ ರೂಪಾಯಿಗಳ ಚೆಕ್‌ ಬೌನ್ಸ್‌ ಮಾಡಿ ವಂಚಿಸಿದ ಪ್ರಕರಣದಲ್ಲಿ ನಟಿ ಪದ್ಮಜಾ ರಾವ್ ದೋಷಿ ಎಂದು ನ್ಯಾಯಲಯ ತೀರ್ಪು ನೀಡಿದೆ. ಈ ಪ್ರಕಾರ ನಟಿ ಪದ್ಮಜಾ ರಾವ್ ಗೆ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 


ತುಳು ಚಿತ್ರರಂಗದ ಸ್ಟಾರ್‌ ನಿರ್ದೇಶಕ ಮತ್ತು ನಟ ವೀರೇಂದ್ರ  ಶೆಟ್ಟಿ ಒಡೆತನದ ವೀರೂ ಟಾಕೀಸ್‌ ನಿರ್ಮಾಣ ಸಂಸ್ಥೆಯಿಂದ ಹಂತ ಹಂತವಾಗಿ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದ ಪದ್ಮಜಾ ರಾವ್‌, ಅದನ್ನು ಮರಳಿ ಕೇಳಿದಾಗ ವಾಪಾಸ್ ನೀಡದೆ ವಂಚಿಸಿದ್ದರು. ಕೊನೆಗೂ ಒತ್ತಡಕ್ಕೆ ಮಣಿದು ತನ್ನ ಐಸಿಐಸಿಐ ಬ್ಯಾಂಕ್ ಖಾತೆ ಚೆಕ್‌ ಅನ್ನು ವೀರೂ ಟಾಕೀಸ್ ಹೆಸರಲ್ಲಿ ನೀಡಿದ್ದರು. ಆದರೆ ಖಾತೆಯಲ್ಲಿ ಹಣವಿಲ್ಲದೆ ಆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ವೀರೇಂದ್ರ ಶೆಟ್ಟಿ ಮಂಗಳೂರಿನ JMFC 8ನೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯ ಎಷ್ಟು ಸಮನ್ಸ್  ಕಳಿಸಿದರೂ  ಪದ್ಮಜಾ ರಾವ್ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿರಲೇ ಇಲ್ಲ. ಆ ನಂತರ ನ್ಯಾಯಾಲಯ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. ಮರುದಿನವೇ ಮಂಗಳೂರು ನ್ಯಾಯಾಲದಲ್ಲಿ ಶರಣಾಗಿದ್ದರು. ಅಲ್ಲಿಂದ ಜಾಮೀನು ಪಡೆದ ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿತ್ತು. 

ನಾಲ್ಕು ವರ್ಷಗಳ ನಂತರ ಇದೀಗ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ ಪದ್ಮಜಾ ರಾವ್ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ, 40 ಲಕ್ಷದ 17 ಸಾವಿರ ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಹಾಗೂ 3000 ಸಾವಿರ ರೂಪಾಯಿಗಳನ್ನು ದಂಡವಾಗಿ ಸರಕಾರಕ್ಕೆ ಪಾವತಿಸುವಂತೆ ಆದೇಶ ನೀಡಿದೆ. ಒಟ್ಟು 40 ಲಕ್ಷದ 20 ಸಾವಿರ ರೂಪಾಯಿಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಶಿಕ್ಷೆ ವಿಧಿಸಿದೆ. ಹಾಗಾಗಿ ನಟಿ ಪದ್ಮಜಾ ರಾವ್ ಜೈಲು ಪಾಲಗ್ತಾರಾ? ಪಾರಾಗ್ತಾರ? ಕಾದು ನೋಡಬೇಕಿದೆ.