ಮೈಸೂರು : ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದ ಭುಗಿಲೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿಯಾಗಿ ಘೋಷಣೆಯಾಗಿದೆ. ಈ ಭೂಮಿ ಮೈಸೂರು ತಾಲೂಕು ಇಲವಾಲ ಗ್ರಾಮದಾಗಿದೆ. ವರುಣಾದ ಬಳಿಕ ಇಲವಾಲದ ಭೂಮಿ ವಕ್ಫ್ ಆಸ್ತಿಯಾಗಿದೆ.

ಮೊನ್ನೆ ಟಿ. ನರಸೀಪುರದ ರಂಗಸಮುದ್ರದಲ್ಲಿ ಸ್ಮಶಾನಭೂಮಿ ಪರಭಾರೆಯಾಗಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ತಾಲೂಕು, ಸಿಎಂ ಸ್ಪರ್ಧಿಸುವ ವರುಣಾ ಕ್ಷೇತ್ರದ ರಂಗಸಮುದ್ರ ಗ್ರಾಮ, ಈವತ್ತು ಇಲವಾಲದ ಸರ್ವೆ ನಂಬರ್ 54 ರಲ್ಲಿರುವ 34 ಗುಂಟೆ ಭೂಮಿಯನ್ನ ವಕ್ಫ್ ಎಂದು ಆರ್ ಟಿಸಿ ನಮೂದಿಸಲಾಗಿದೆ. 2020 ರವರಗೆ ಸರ್ಕಾರಿ ಭೂಮಿ ಎಂದು ನಮೂದು ಮಾಡಲಾಗಿತ್ತು.

ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಇಲವಾಲ ರ ರೈತರು ಬಳಸುತ್ತಿದ್ದ ಭೂಮಿ ವಕ್ಫ್ ಆಸ್ತಿಯಾಗಿದೆ. 2022 ರಿಂದ ವಕ್ಫ್ ಆಸ್ತಿ ಎಂದು ಆರ್ ಟಿಸಿಯಲ್ಲಿ ಉಲ್ಲೇಖ ಮಾಡಿದೆ. ಈ ಹಿನ್ನೆಲೆ ಮೈಸೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮೈಸೂರಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿ ಎಂದು ಆರ್ ಟಿಸಿ ನಮೂದಿಸಲಾಗಿದೆ.
