ಮಾಸ್ಕೋ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಮತ್ತು ಚೀನಾದ ಮಾಜಿ ವಿಶ್ವಚಾಂಪಿಯನ್ ಡಿಂಗ್ ಲಿರೆನ್ ನಡುವಿನ ಪಂದ್ಯದ ಬಗ್ಗೆ ರಷ್ಯಾ ಚೆಸ್ ಫೆಡರೇಷನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ ಅನುಮಾನ ವ್ಯಕ್ತಪಡಿಸಿದಾರೆ.
ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ ಅವರು ಡಿಸೆಂಬರ್ 12 ರ ಶುಕ್ರವಾರದಂದು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಲೋಕಕ್ಕೆ ಸಾಮ್ರಾಟನಾಗಿದ್ದಾರೆ. ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ 18 ವರ್ಷದ ಗುಕೇಶ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಆದರೆ, ಇದೀಗ ಗುಕೇಶ್ ಅವರ ಐತಿಹಾಸಿಕ ಗೆಲುವಿನ ಬಗ್ಗೆ ಫಿಕ್ಸಿಂಗ್ ಆರೋಪ ಕೇಳಿ ಬರುತ್ತಿದೆ. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ , ಚೀನಾದ ಆಟಗಾರ ಲಿರೆನ್ ಉದ್ದೇಶಪೂರ್ವಕವಾಗಿ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ ಫಿಡೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಫಲಿತಾಂಶದಿಂದ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳು ತೃಪ್ತರಾಗಿಲ್ಲ. ಗುಕೇಶ್ ವಿರುದ್ಧದ ಕೊನೆಯ ಗೇಮ್ನಲ್ಲಿ ಡಿಂಗ್ ಲಿರೆನ್ ಮಾಡಿದ ಕೆಲವು ಮೂವ್ಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೀಗಾಗಿ FIDE ಅದನ್ನು ತನಿಖೆ ನಡೆಸಬೇಕು. ಚೀನಾದ ಆಟಗಾರ ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತಿರುವಂತೆ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದಾರೆ.