ವಿದೇಶ

ರಕ್ಕಸ ಅಲೆಗಳ ಅರ್ಭಟಕ್ಕೆ ಸಮುದ್ರ ಪಾಲಾದ ನಟಿ..! ಅಯ್ಯೋ..!

ಥಾಯ್ಲೆಂಡ್‌ಗೆ ಪ್ರವಾಸಕ್ಕೆಂದು ಆಗಮಿಸಿದ್ದ ರಷ್ಯಾದ 24 ವರ್ಷದ ನಟಿ ಕ್ಯಾಮಿಲ್ಲಾ,, ನೋಡ.. ನೋಡುತ್ತಲೇ ಸಮುದ್ರದ ಪಾಲಾಗಿದ್ದಾಳೆ..

ಸಾವು ಅನ್ನೋದು ಯಾವಾಗ, ಹೇಗೆ ಬಂದು ಅಪ್ಪಳಿಸುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ.. ಥಾಯ್ಲೆಂಡ್‌ಗೆ ಪ್ರವಾಸಕ್ಕೆಂದು ಆಗಮಿಸಿದ್ದ ರಷ್ಯಾದ 24 ವರ್ಷದ ನಟಿ ಕ್ಯಾಮಿಲ್ಲಾ,, ನೋಡ.. ನೋಡುತ್ತಲೇ ಸಮುದ್ರದ ಪಾಲಾಗಿದ್ದಾಳೆ.. ಸಾಗರದ ಕಲ್ಲು ಬಂಡೆಯ ಮೇಲೆ ಯೋಗ ಮಾಡ್ತಿದ್ದ ನಟಿ ಕ್ಯಾಮಿಲ್ಲಾಳನ್ನ ರಕ್ಕಸ ಅಲೆಗಳು ಎಳೆದುಕೊಂಡು ಹೋಗಿವೆ..

ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್‌ ಜೊತೆ ಥಾಯ್ಲೆಂಡ್‌ನ ಪ್ರಸಿದ್ಧ ರೆಸಾರ್ಟ್ ಕೊಹ್ ಸಮುಯಿ ದ್ವೀಪಕ್ಕೆ ರಷ್ಯಾದ ಯುವ ನಟಿ ಕ್ಯಾಮಿಲ್ಲಾ ಆಗಮಿಸಿದ್ದರು.. ಗೆಳೆಯನ ಜೊತೆ ಜಾಲಿ ಟ್ರಿಪ್‌ಗೆ ಬಂದಿದ್ದ ವೇಳೆ ಸಮುದ್ರ ತೀರದ ಬಂಡೆಯ ಮೇಲೆ ಯೋಗ ಭಂಗಿಯಲ್ಲಿ ಕುಳಿದ್ದಾಗ ಅಲೆಗಳ ರಭಸ ಹೆಚ್ಚಾಗಿ ನಟಿ ಕ್ಯಾಮಿಲ್ಲಾಳನ್ನ ಎಳೆದುಕೊಂಡು ಹೋಗಿದೆ.. ಸಮುದ್ರದ ಅಲೆ ಜೋರಾಗಿ ಅಪ್ಪಳಿಸೋ ವಿಡಿಯೋದಲ್ಲಿ ಇಡೀ ಘಟನೆ ಸೆರೆಯಾಗಿದೆ.. ನಟಿ ಕ್ಯಾಮಿಲ್ಲಾ ಕೊಚ್ಚಿಹೋಗ್ತಿದ್ದಂತೆ ರಕ್ಷಣಾ ತಂಡಗಳಿಗೆ ಮಾಹಿತಿ ನೀಡಲಾಗಿತ್ತು.. ಆದ್ರೆ ಅದಾಗಲೇ ಕ್ಯಾಮಿಲ್ಲಾ ಉಸಿರು ಚೆಲ್ಲಿದ್ದು, ನಟಿಯ ಮೃತದೇಹ ಕೆಲವು ಕಿಲೋಮೀಟರ್ ದೂರದಲ್ಲಿ ರಕ್ಷಣಾ ತಂಡಕ್ಕೆ ಸಿಕ್ಕಿದೆ..