ಕರ್ನಾಟಕ
ಯತ್ನಾಳ್ & ರೇಣುಕಾಚಾರ್ಯ ಟೀಂ ಬೀದಿ ಕಾಳಗಕ್ಕೆ ಡಿವಿಎಸ್ ಸಿಡಿಮಿಡಿ
ಬಿಜೆಪಿಯೊಳಗಿನ ಯತ್ನಾಳ್ & ರೇಣುಕಾಚಾರ್ಯ ಟೀಂ ವಾಕ್ಸಮರಕ್ಕೆ ಡಿ.ವಿ. ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ಬಿಜೆಪಿಯೊಳಗಿನ ಯತ್ನಾಳ್ & ರೇಣುಕಾಚಾರ್ಯ ಟೀಂ ವಾಕ್ಸಮರಕ್ಕೆ ಡಿ.ವಿ. ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಶಾಸಕ ಯತ್ನಾಳ್ ಬೀದಿಯಲ್ಲಿ ಮಾತಾಡ್ತಾರೆ ಅಂತಾ ಆರೋಪಿಸುತ್ತಲೇ, ರೇಣುಕಾಚಾರ್ಯ ಮತ್ತು ಬೆಂಬಲಿಗರೂ ಅದೇ ತಪ್ಪು ಮಾಡ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.. ಯಾವುದೇ ಒಬ್ಬ ವ್ಯಕ್ತಿಯನ್ನು ಹೊರಗೆ ಹಾಕಿ ಅಥವಾ ಉಳಿಸಿಕೊಳ್ಳಿ ಅಂತ ಹೇಳಲು ಆಗಲ್ಲ, ಆಗ ನಾವು ಅವರ ಅಥವಾ ಇವರ ಪರ ಅಂತಾಗುತ್ತೆ, ಪ್ರಾಮಾಣಿಕರು ಎಲ್ಲವನ್ನೂ ಸರಿ ಮಾಡಲು ಹೋದರೆ ಅದೇ ಅಪರಾಧ ಅಂತಾರೆ ಅಂತಾ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.. ಬಿ.ವೈ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರಾಗಿ ವರಿಷ್ಠರು ನೇಮಿಸಿದ್ದಾರೆ, ಆರ್. ಅಶೋಕ್‌ರನ್ನ ವಿಪಕ್ಷ ನಾಯಕರಾಗಿ ಮಾಡಿದವರು ವರಿಷ್ಠರೇ, ಇವರಿಬ್ಬರ ಬಗ್ಗೆ ಏನಾದರೂ ಹೇಳೋದಾದರೆ ದೆಹಲಿಯವರೇ ಹೇಳಬೇಕು ಅಂತಾ ಹೇಳಿದ್ದಾರೆ..