ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕ ಮಾಡಿದ್ದು ಹೈಕಮಾಂಡ್. ವಿರೋಧಿಗಳು ದೆಹಲಿಗೆ ಹೋಗಿ ಮಾತಾಡಬೇಕು. ಅದು ಬಿಟ್ಟು ಬೀದರ್ ನಲ್ಲಿ ನಿಂತು ತಮಟೆ ಬಾರಿಸ್ತೀದ್ದಾರೆ ಎಂದು, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಬಿಜೆಪಿ ರೆಬೆಲ್ ನಾಯಕರ ವಿರುದ್ಧ ಗುಡುಗಿದ್ದಾರೆ. ಅವರು ಎಲ್ಲರು ಹೈಕಮಾಂಡ್ ಗೆ ಹತ್ತಿರ ಇರೋರೇ. ಆದ್ರೂ ಈಗ ಬೀದಿಯಲ್ಲಿ ಮಾತಾಡ್ತಿದ್ದಾರೆ ಅಂದರೆ ಅವರು ಯೋಗ್ಯರಲ್ಲ ಎಂದು ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಡಿವಿಎಸ್ ಗರಂ ಆಗಿದ್ದಾರೆ.
ಪಕ್ಷದ ಆಂತರಿಕ ವಿಷಯದ ಬಗ್ಗೆ ಯಾರು ಮಾತಾಡಿದ್ರು ಅದು ಅಶಿಸ್ತೆ..ನಾನು ಶಸ್ತ್ರ ತ್ಯಾಗ ಮಾಡುವ ಪ್ರಶ್ನೇಯೇ ಇಲ್ಲ, ಪಕ್ಷದಲ್ಲಿ ಶುದ್ದೀಕರಣವಾಗಬೇಕು..ಎರಡು ಬಣಗಳು ಬೀದಿಗೆ ಹೋಗುವ ಬದಲು ಫ್ಲೈಟ್ ಹತ್ತಿ ದೆಹಲಿಗೆ ಹೋಗಿ..ಬೀದಿಗೆ ಹೋಗಿ ಕೈ ಕೈ ಮಿಲಾಯಿಸಿಕೊಳ್ಳುವ ಬದಲು ವರಿಷ್ಠರ ಬಳಿ ಹೋಗಿ ಮಾತಾಡಿ..ಪಕ್ಷದ ಮೇಲೆ ನಿಮಗೆ ನಿಜವಾಗಿಯೂ ಗೌರವ ಇದ್ದರೆ ಹೋಗಿ, ಇಲ್ಲ ಅಂದರೆ ನೀವೇ ಸ್ವಾರ್ಥಿಗಳು..ಇಲ್ಲ ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನ್ನಿಸಿಕೊಳ್ಳೋಕೆ ನೀವು ನಾಲಾಯಕ್ಕೂ ಎಂದಿದ್ದಾರೆ.