ಕರ್ನಾಟಕ

ಬಿಜೆಪಿಯಲ್ಲಿ ಬಣ ರಾಜಕೀಯ..ಸದಾನಂದಗೌಡ ಅಸಮಾಧಾನ..!

ಪಕ್ಷದ ಭಿನ್ನಮತದ ಬಗ್ಗೆ ಎರಡು ಬಾರಿ ವರಿಷ್ಠರಿಗೆ ಪತ್ರ ಬರೆದಿದ್ದೆ. ಆದರೆ ಅದಕ್ಕೆ ಅವರು ಸ್ಪಂದಿಸದಿರೋದು ಮನಸ್ಸಿಗೆ ನೋವು ತಂದಿದೆ ಎಂದು ಸದಾನಂದಗೌಡ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅಸಮಾಧಾನಕ್ಕೊಳಗಾದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ  ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಪಕ್ಷದ ಭಿನ್ನಮತದ ಬಗ್ಗೆ ಎರಡು ಬಾರಿ ವರಿಷ್ಠರಿಗೆ ಪತ್ರ ಬರೆದಿದ್ದೆ. ಆದರೆ ಅದಕ್ಕೆ ಅವರು ಸ್ಪಂದಿಸದಿರೋದು ಮನಸ್ಸಿಗೆ ನೋವು ತಂದಿದೆ ಎಂದು ವ್ಯಕ್ತಪಡಿಸಿದ್ದಾರೆ.

ಈಗ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ದುರದೃಷ್ಟಕರ ಎನಿಸಿದೆ. ನಾನು ಅಧ್ಯಕ್ಷನಾಗಿದ್ದಾಗ ಇದಕ್ಕಿಂತಲೂ ಪ್ರಬಲ ಗುಂಪುಗಳಿದ್ದವು. ಆದರೆ ಅವು ಯಾವ ಗುಂಪುಗಳು ಬೀದಿಗೆ ಇಳಿದಿರಿಲ್ಲ. ಆದರೆ ಪಕ್ಷದಲ್ಲೇ ಪ್ರಥಮವಾಗಿ ಬೀದಿಗೆ ಬಂದಿರೋದು ಅತ್ಯಂತ ನೋವಿನ ಸಂಗತಿ. ಕೆಲವರು ಈ ರೀತಿಯ ಆದರೆ ಒಳ್ಳೆಯದ ನಮಗೆ ಅನುಕೂಲ ಆಗಬಹುದು ಎಂದು ಬಿಜೆಪಿಯಲ್ಲಿ ಕೆಲವರು ಇದ್ದಾರೆ. ದೇಶದಲ್ಲೆಲ್ಲೂ ಇರದ ಇಶ್ಯೂಗಳು ರಾಜ್ಯದಲ್ಲಿವೆ. ಇಂತಹ ವಿಷಯಗಳ ಮೇಲೆ ಒಗ್ಗಟ್ಟಿನ ಹೋರಾಟ ಮಾಡದೇ ಬೀದಿಗಿಳಿದಿದ್ದಾರೆ..ಇದನ್ನು ಹೈಕಮಾಂಡ್‌ ಗಂಭಿರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.