ಗೋಕಾಕ: ಗೊಕಾಕ್ ನಗರದಲ್ಲಿ ದಿನದಿಂದ ದಿನಕ್ಕೆ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ಯುವಜನತೆಯನ್ನೆ ಗುರಿಯಾಗಿಸಿಕೊಂಡು ಹಾಡುಹಗಲೆ ಗ್ರಾಂ ಲೆಕ್ಕದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ತಕ್ಷಣ ಬ್ರೇಕ್ ಹಾಕದಿದ್ದರೆ ಸಾಮಾಜಿಕ ಹಾನಿಗೆ ದಾರಿ ಮಾಡಿಕೊಡುವ ಸಂಭವ ಹೆಚ್ಚಿದೆ.
ಎಲ್ಲೆಲ್ಲಿ ಮಾರಾಟವಾಗುತ್ತಿದೆ?
ನಗರದ ಎಪಿಎಂಸಿ ಗೋದಾಮು, ಕಾಲೇಜುಗಳ ಹತ್ತಿರ ಬಂದು ಬೈಕ್‌ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಅರಣ್ಯ ಪ್ರದೇಶವೇ ಗಾಂಜಾ, ಬಿಡಿ, ಸೀಗರೇಟ್ ವ್ಯಸನಿಗಳ ಅಡ್ಡಯಾಗಿದ್ದರೂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
ಇದೇ ನೋಡಿ ಗಾಂಜಾ ಸೇವನೆ ಅಡ್ಡ..!
ನಗರದ ಚೌಡೇಶ್ವರಿ ಬೆಟ್ಟದ ಅರಣ್ಯ ಪ್ರದೇಶ, ಯೋಗಿಕೊಳ್ಳ ರಸ್ತೆ, ಎಪಿಎಂಸಿ ಗೋದಾಮುಗಳ ಆವರಣ, ವಾಲ್ಮೀಕಿ ಕ್ರೀಡಾಂಗಣ ಮತ್ತು ಹಿಂಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಕುಂಬಾರ ಗಲ್ಲಿಯ ಸ್ಮಶಾನದ ಹತ್ತಿರ, ಸಿದ್ಧೇಶ್ವರ ದೇವಸ್ಥಾನ ಬಳಿ ಪಂಪ್‌ಹೌಸ್ ಹೀಗೆ ಅನೇಕ ಸ್ಥಳಗಳನ್ನು ವ್ಯಸನಿಗಳು ಗಾಂಜಾ ಸೇವನೆಯ ಅಡ್ಡೆ ಮಾಡಿಕೊಂಡಿದ್ದಾರೆ.