ಕ್ರೀಡೆಗಳು

ಜಸ್ಪ್ರೀತ್‌ ಬುಮ್ರಾ ದಾಖಲೆ ಓಟಕ್ಕೆ ಬ್ರೇಕ್‌ ಹಾಕಿದ ಸ್ಯಾಮ್‌ ಕಾನ್‌ಸ್ಟಾಸ್‌

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ನಂಬರ್‌ 1 ಟೆಸ್ಟ್‌ ಬೌಲರ್‌ ಮತ್ತು ಟೀಂ ಇಂಡಿಯಾದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ದಾಖಲೆಯ ಓಟಕ್ಕೆ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್‌ ಕಾನ್‌ಸ್ಟಾಸ್‌ ಬ್ರೇಕ್‌ ಹಾಕಿದ್ದಾರೆ.

ಮೆಲ್ಬೋರ್ನ್‌: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ನಂಬರ್‌ 1 ಟೆಸ್ಟ್‌ ಬೌಲರ್‌ ಮತ್ತು ಟೀಂ ಇಂಡಿಯಾದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ದಾಖಲೆಯ ಓಟಕ್ಕೆ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್‌ ಕಾನ್‌ಸ್ಟಾಸ್‌ ಬ್ರೇಕ್‌ ಹಾಕಿದ್ದಾರೆ.

ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ಬುಮ್ರಾಗೆ ಆಸ್ಟ್ರೇಲಿಯಾದ ಯುವ ಆಟಗಾರ ಶಾಕ್‌ ನೀಡಿದ್ದಾರೆ. ಬುಮ್ರಾ ಎಸೆತಗಳನ್ನು ಬೌಂಡರಿ, ಸಿಕ್ಸರ್‌ ಸಿಡಿಸುವ ಮೂಲಕ ಆಕರ್ಷಕ ಅರ್ಧ ಶತಕ ಗಳಿಸಿದರು. ಇನ್ನು ಬುಮ್ರಾ ಎಸೆತವನ್ನು ಸಿಕ್ಸರ್‌ ಸಿಡಿಸುವ ಮೂಲಕ ಕಾನ್‌ಸ್ಟಾಸ್‌ ಬುಮ್ರಾ ಹೆಸರಿನಲ್ಲಿದ್ದ ದಾಖಲೆಗೆ ಬ್ರೇಕ್‌ ಹಾಕಿದರು. ಶಿಸ್ತು ಬದ್ಧವಾಗಿ ಬೌಲಿಂಗ್‌ ಮಾಡುವ ಬುಮ್ರಾ ಕಳೆದ 3 ವರ್ಷದಿಂದ ಟೆಸ್ಟ್‌ ನಲ್ಲಿ ಸಿಕ್ಸರ್‌ ಸಿಡಿಸಲು ಅವಕಾಶ ನೀಡಿರಲಿಲ್ಲ. ಆದರೆ ಕಾನ್‌ಸ್ಟಾಸ್‌ ಬರೋಬ್ಬರಿ 4483 ಎಸೆತಗಳ ಬಳಿಕ ಬುಮ್ರಾ ಗೆ ಸಿಕ್ಸರ್‌ ಸಿಡಿಸಿದ್ದಾರೆ.

ಇದಕ್ಕೂ ಮೊದಲು ಮೂರು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ವೇಗಿ ಬುಮ್ರಾ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು. ಇದಾದ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಇಲ್ಲಿಯವರೆಗೂ ಯಾವೊಬ್ಬ ಬ್ಯಾಟರ್ ಸಹ ಬುಮ್ರಾಗೆ ಸಿಕ್ಸರ್ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಸ್ಯಾಮ್ ಕಾನ್ಸ್ಟಾಸ್ಟೆಸ್ಟ್ ಕ್ರಿಕೆಟ್ನಲ್ಲಿ ತಾವೆದುರಿಸಿದ 23ನೇ ಎಸೆತದಲ್ಲೇ ರಿವರ್ಸ್ ಸ್ಕೂಪ್‌ ಮೂಲಕ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

ಇದೇ ಪಂದ್ಯದ 11 ನೇ ಓವರ್‌ ನಲ್ಲಿ ಬುಮ್ರಾ ಬರೋಬ್ಬರಿ 18 ರನ್ ಬಿಟ್ಟು ಕೊಟ್ಟರು. ಈ ಮೂಲಕ ಬುಮ್ರಾ ತಮ್ಮ ಟೆಸ್ಟ್‌ ಕ್ರಿಕೆಟ್‌ ಕೆರಿಯರ್‌ ನಲ್ಲಿ ಒಂದೇ ಓವರ್‌ ನಲ್ಲಿ ಅತಿ ಹೆಚ್ಚು ರನ್‌ ಬಿಟ್ಟುಕೊಟ್ಟ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು.