ಸ್ಪೆಷಲ್ ಸ್ಟೋರಿ

ಕನ್ನಡ ಮಾಧ್ಯಮ ಕ್ಷೇತ್ರದಲ್ಲೊಂದು ಸಂಚಲನ .. ಸಮಯ ನ್ಯೂಸ್ ಶುಭಾರಂಭ

ಹೊಸತನ್ನ ಕಟ್ಟುವುದೇ ಒಂದು ಕ್ರಾಂತಿ. ಹೊಸತನ್ನ ಹುಟ್ಟು ಹಾಕುವುದೇ ಒಂದು ಕ್ರಾಂತಿ. ಸಮಾಜಕ್ಕೆ ಬೆಳಕಾಗುವುದೇ ಒಂದು ಕ್ರಾಂತಿ. ಬದಲಾವಣೆಯನ್ನ ತರುವುದೂ ಒಂದು ಕ್ರಾಂತಿಯೇ.. ಈ ಕ್ರಾಂತಿ ಎನ್ನುವ ಪದಕ್ಕೆ ಅಂತ್ಯವೇ ಇಲ್ಲ. ಅದು ನಿತ್ಯ ನಿರಂತರ. ಆಯಾ ಕಾಲಘಟ್ಟಕ್ಕೆ ಜಗತ್ತಿನಾದ್ಯಂತ ಕ್ರಾಂತಿಗಳು ಸಂಭವಿಸುತ್ತಲೇ ಇರುತ್ತವೆ. ಸಂಭವಿಸಲೇಬೇಕು ಕೂಡ. ಜಗತ್ತಿನ ಪ್ರತಿಯೊಂದು ಕ್ರಾಂತಿಯಲ್ಲೂ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಈಗ ಮತ್ತೆ ಕ್ರಾಂತಿ ಆಗಬೇಕು ಎನ್ನುವ ತೇಜಸ್ವಿಯವರ ಸಾಲಿನ ಆಶಯದೊಂದಿಗೆ ಕನ್ನಡಿಗರ ಮನ ಮನೆಗಳನ್ನ ತಲುಪೋಕೆ ಬರುತ್ತಿದೆ ನಿಮ್ಮೆಲ್ಲರ ನೆಚ್ಚಿನ ‘ಸಮಯ ನ್ಯೂಸ್’.

'ಒಟ್ನಲ್ಲಿ ಕ್ರಾಂತಿ ಆಗಬೇಕು...' ಕನ್ನಡದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು 1985ರಲ್ಲಿ ರಚಿಸಿದ ಚಿದಂಬರ ರಹಸ್ಯ ಕೃತಿಯ ಮೊಟ್ಟ ಮೊದಲ ಸಾಲು 'ಒಟ್ನಲ್ಲಿ ಕ್ರಾಂತಿ ಆಗಬೇಕು...' ಪ್ರಿಯ ಕನ್ನಡಿಗರೇ, ಸಾಲು 1985ರಿಂದ 2024 ಇವತ್ತಿನವರೆಗೂ ಪ್ರಸ್ತುತ.. ಕ್ರಾಂತಿ ಎಂದರೆ ರಷ್ಯಾ ಕ್ರಾಂತಿಯೇ ಆಗಬೇಕಿಲ್ಲ. ದೇಶದೊಳಗಿನ ನಕ್ಸಲ್ ಕ್ರಾಂತಿಯೇ ಆಗಬೇಕಿಲ್ಲ. ಕ್ರಾಂತಿಗಾಗಿ ರಕ್ತವನ್ನೇ ಬಸಿಯಬೇಕಿಲ್ಲ. ಹೊಸತನ್ನ ಕಟ್ಟುವುದೇ ಒಂದು ಕ್ರಾಂತಿ. ಹೊಸತನ್ನ ಹುಟ್ಟು ಹಾಕುವುದೇ ಒಂದು ಕ್ರಾಂತಿ. ಸಮಾಜಕ್ಕೆ ಬೆಳಕಾಗುವುದೇ ಒಂದು ಕ್ರಾಂತಿ. ಬದಲಾವಣೆಯನ್ನ ತರುವುದೂ ಒಂದು ಕ್ರಾಂತಿಯೇ.. ಕ್ರಾಂತಿ ಎನ್ನುವ ಪದಕ್ಕೆ ಅಂತ್ಯವೇ ಇಲ್ಲ. ಅದು ನಿತ್ಯ  ನಿರಂತರ. ಆಯಾ ಕಾಲಘಟ್ಟಕ್ಕೆ ಜಗತ್ತಿನಾದ್ಯಂತ ಕ್ರಾಂತಿಗಳು ಸಂಭವಿಸುತ್ತಲೇ ಇರುತ್ತವೆ. ಸಂಭವಿಸಲೇಬೇಕು ಕೂಡ. ಜಗತ್ತಿನ ಪ್ರತಿಯೊಂದು ಕ್ರಾಂತಿಯಲ್ಲೂ ಮಾಧ್ಯಮಗಳು ಅತ್ಯಂತ  ಪ್ರಮುಖ ಪಾತ್ರ ವಹಿಸಿವೆ. ಈಗ ಮತ್ತೆ ಕ್ರಾಂತಿ ಆಗಬೇಕು ಎನ್ನುವ ತೇಜಸ್ವಿಯವರ ಸಾಲಿನ ಆಶಯದೊಂದಿಗೆ ಕನ್ನಡಿಗರ ಮನ ಮನೆಗಳನ್ನ ತಲುಪೋಕೆ ಬರುತ್ತಿದೆ ನಿಮ್ಮೆಲ್ಲರ ನೆಚ್ಚಿನಸಮಯ ನ್ಯೂಸ್’.

ಸಮಯ ನ್ಯೂಸ್ ಕನ್ನಡಿಗರಿಗೆ ಹೊಸದೇನಲ್ಲ. 2010ರಲ್ಲೇ ಸದಾಶಯಗಳೊಂದಿಗೆ ಆರಂಭವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ ಜನರ ಮನ ಮನೆಗಳನ್ನ ತಲುಪಿ ಮೆಚ್ಚುಗೆ ಪಡೆದಿತ್ತು. ಅನೇಕ ವರ್ಷಗಳ ಕಾಲ ಕರ್ನಾಟಕ ಮಾಧ್ಯಮ ಲೋಕದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು. ಜನಪರ, ರೈತಪರ, ಬಡವರ ಪರ ಹಾಗೂ ಮಹಿಳೆಯರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯ ನ್ಯೂಸ್ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಆದರೆ ಕನ್ನಡಿಗರ ಮನಸ್ಸಿನಿಂದ ಮರೆಯಾಗಿರಲಿಲ್ಲ. ಅದೇ ಸಮಯ ನ್ಯೂಸ್ ಈಗ ಪುನಃ ಕನ್ನಡಿಗರ ಮುಂದೆ ಬರುತ್ತಿದೆ. ಸದಾ ನಿಮ್ಮೊಂದಿಗೆ ಎನ್ನುವ ಘೋಷವಾಕ್ಯದೊಂದಿಗೆ ಪುನರಾರಂಭ ಮಾಡುತ್ತಿರುವ ಸಮಯ ನ್ಯೂಸ್ಗೆ ಸದಾ ನಿಮ್ಮ ಹಾರೈಕೆ, ನಿಮ್ಮ ಬೆಂಬಲವಿರಲಿ.

 

ಹೊಸ ತಂಡ.. ಹೊಸ ಆಲೋಚನೆ.. ಹೊಸ ಹುರುಪು..

ಸಮಯ ನ್ಯೂಸ್ ಪುನಃ ಆರಂಭವಾಗುತ್ತಿದೆ ಎನ್ನುವ ಸಂಗತಿಯೇ ಒಂದು ಸೆನ್ಸೇಷನ್. ಯಾಕಂದ್ರೆ, ಕಳೆದ ಅನೇಕ ವರ್ಷಗಳಿಂದ ಸಮಯ ನ್ಯೂಸ್ನ ಆರಂಭ ಮಾಡಬೇಕು ಎನ್ನುವ ಮಹದಾಸೆ ಸಮಯ ಸುದ್ದಿ ವಾಹಿನಿಯ ಮಾಲೀಕರದ್ದಾಗಿತ್ತು. ಅದಕ್ಕಾಗಿ ಅನೇಕ ಬಾರಿ ಪ್ರಯತ್ನಗಳು ನಡೆದಿದ್ದವು. ಆದರೆ ಕಾಲ ಕೂಡಿ ಬಂದಿರಲಿಲ್ಲ. ತಮ್ಮ ಕನಸನ್ನ ಸಾಕಾರಗೊಳಿಸುವ ಒಂದು ಉತ್ತಮ ತಂಡಕ್ಕಾಗಿ, ಒಂದು ತಂಡವನ್ನ ಮುನ್ನಡೆಸುವ ನಾಯಕತ್ವಕ್ಕಾಗಿ, ಉದ್ಯಮಿಗಳಾದ ವಿಜಯ್ ಟಾಟಾ ಹಾಗೂ ಬಿ. ರಮಣ ಇಬ್ಬರೂ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೊನೆಗೂ ಕಾಲ ಕೂಡಿದೆ. ಕಾರ್ಮೋಡ ಸರಿದಿದೆ. ಟಿವಿ9, ನ್ಯೂಸ್ 18, ನ್ಯೂಸ್ ಫಸ್ಟ್ ಹಾಗೂ ಟಿವಿ5 ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ 20 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಸತೀಶ್ ಕುಮಾರ್ ಎಂ. ನೇತೃತ್ವದ ತಂಡ ಸಿದ್ಧಗೊಂಡಿದೆ. ಆಗಸ್ಟ್ 16ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ಶುಭ ಮುಹೂರ್ತದಲ್ಲಿ ಸಮಯ ನ್ಯೂಸ್ ಕಾರ್ಯಾರಂಭ ಮಾಡಿದೆ.

ಕನ್ನಡದ ಹತ್ತಾರು ಸುದ್ದಿ ವಾಹಿನಿಗಳ ನಡುವೆ ವಿಭಿನ್ನವಾಗಿ ನಿಲ್ಲುವ, ನಾಡಿನ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ಪ್ರಯತ್ನ ಸಮಯ ನ್ಯೂಸ್. ಯಾರಿಗೂ ಜಗ್ಗದೇ, ಯಾವುದೇ ಸಂದರ್ಭದಲ್ಲೂ ಕುಗ್ಗದೇ, ಗಟ್ಟಿ ಧ್ವನಿಯಲ್ಲಿ ಅನ್ಯಾಯವನ್ನ ಪ್ರಶ್ನೆ ಮಾಡುತ್ತಾ, ದಿಟ್ಟ ಹೆಜ್ಜೆ ಇಡುವ ಹೊಸ ಸಾಹಸ ಸಮಯ ನ್ಯೂಸ್. ಕನ್ನಡಿಗರ ಆಶೋತ್ತರಗಳನ್ನ ಈಡೇರಿಸುವ ಮಹಾಯುದ್ಧ ಸಮಯ ನ್ಯೂಸ್. ನಿಮ್ಮ ಸಮಯ ನ್ಯೂಸ್ಗೆ ಹರಸಿ.. ಹಾರೈಸಿ.. ಬೆಂಬಲಿಸಿ..

- ಸತೀಶ್ ಕುಮಾರ್ ಎಂಪ್ರಧಾನ ಸಂಪಾದಕರು